ಯಾವುದೂ ಶೋ ಶುರು ಆಗದ ಕಾರಣ ನ್ಯೂಸ್ ಚಾನಲ್ ಸೇರಿಕೊಂಡ ಮಾಸ್ಟರ್ ಆನಂದ್.. ಯಾವ ಚಾನಲ್ ಗೊತ್ತಾ?

ಕೊರೊನಾ ಕಾರಣದಿಂದಾಗಿ ಈಗಾಗಲೇ ಸಾಕಷ್ಟು ಕಲಾವಿದರು ಕೆಲಸ ಕಳೆದುಕೊಂಡಿರುವುದಂತೂ ಸತ್ಯ.. ಕೆಲವು ಧಾರಾವಾಹಿಗಳಿಗೂ ಕೂಡ ಅರ್ಧಕ್ಕೆ ಅಂತ್ಯ ಹಾಡಲಾಗಿದೆ.. ಇನ್ನು ರಿಯಾಲಿಟಿ ಶೋಗಳಿಗೆ ಶೂಟಿಂಗ್ ಗೆ ಅವಕಾಶ ನೀಡಿರಲಿಲ್ಲ.. ಧಾರಾವಾಹಿಗಳಿಗೆ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು ಈಗಾಗಲೇ ಶೂಟಿಂಗ್ ಶುರುವಾಗಿದ್ದು ಇದೇ ಜೂನ್ 1 ರಿಂದ ಎಲ್ಲಾ ಧಾರಾವಾಹಿಗಳ ಹೊಸ ಸಂಚಿಕೆಗಳ ಪ್ರಸಾರ ಆರಂಭವಾಗಲಿದೆ..

ಆದರೆ ಈಗ ನಡೆಯುತ್ತಿರುವ ಚಿತ್ರೀಕರಣದಲ್ಲಿಯೂ ಕೂಡ ಕೆಲ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದ್ದು ಕೆಲವೇ ಕಲಾವಿದರನ್ನು ಬಳಸಿಕೊಂಡು ಶೂಟಿಂಗ್ ಮಾಡುತಲಿದ್ದು, ಮೊದಲಿನಂತ ಆಡಂಬರ.. ಹೆಚ್ಚಿನ ಸಹ ಕಲಾವಿದರು ಇದ್ಯಾವುದೂ ಇರುವುದಿಲ್ಲವೆಂದು ಅನೇಕ ಧಾರಾವಾಹಿ ತಂಡದವರು ತಿಳಿಸಿದ್ದಾರೆ..

ಇನ್ನು ರಿಯಾಲಿಟಿ ಶೋಗಳು ಯಾವುದೂ ಶುರು ಆಗಿಲ್ಲ.. ಸದ್ಯಕ್ಕೆ ಶುರು ಆಗೋದು ಇಲ್ಲವೆನ್ನಲಾಗುತ್ತಿದೆ.. ಆದರೆ ನಮ್ಮ‌ ಮಾಸ್ಟರ್ ಆನಂದ್ ಅದ್ಯಾಕೋ ಶೋ ಶುರು ಆಗಲಿಲ್ಲವೆಂದು ನ್ಯೂಸ್ ಚಾನಲ್ ಜಾಯಿನ್ ಆದಂತೆ ಕಾಣುತ್ತಿದೆ.. ಈ ರೀತಿ ಪ್ರಶ್ನೆ ಮೂಡಲು ಕಾರಣ ಮಾಸ್ಟರ್ ಆನಂದ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ.. ಹೌದು ನ್ಯೂಸ್ ಆಂಕರ್ ಉಡುಗೆಯಲ್ಲಿ ಮಾಸ್ಟರ್ ಆನಂದ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ..

ಆದರೆ ವಾಸ್ತವ ಬೇರೆಯೇ ಇದೆ.. ಹೌದು ಮಾಸ್ಟರ್ ಆನಂದ್ ಯಾವ ನ್ಯೂಸ್ ಚಾನಲ್ ಗೂ ಸೇರಿಕೊಂಡಿಲ್ಲ.. ಈ ಬಗ್ಗೆ ಮಾಸ್ಟರ್ ಆನಂದ್ ಅವರೇ ತಿಳಿಸಿದ್ದು “”ಕರೋನ ಇಂದ ಯಾವುದು ಶೋ ಸ್ಟಾರ್ಟ್ ಆಗದೆ ಕಾದು ಕಾದು ನ್ಯೂಸ್ ಚಾನಲ್ ಜಾಯಿನ್ ಆದೆ.
ನಿಮ್ಮ ಮುಂದೆ ಹೊಸ ಸುದ್ದಿ ತರೋ ಅವತಾರದಲ್ಲಿ ನನ್ನ ನೋಡಿ ಹರಸಿ”
ಅಂತ ಹೇಳ್ತ ಇದೀನಿ ಅನ್ಕೊಂಡ್ರಾ, ಈ ನ್ಯೂಸ್ ಆಂಕರ್ ಗೆಟ್ ಅಪ್ ನಿಮ್ಮ ಮುಂದೇ ಅತೀ ಶೀಘ್ರದಲ್ಲಿ,,,, ಕಾದು ನೋಡಿ Zee ವಾಹಿನಿಯಲ್ಲಿ” ಎಂದು ಬರೆದು ಪೋಸ್ಟ್ ಮಾಡಿದ್ದು.. ಸದ್ಯದಲ್ಲಿಯೇ ಹೊಸ ಅವತಾರದಲ್ಲಿ ಜೀ ವಾಹಿನಿಯಲ್ಲಿಯೇ ಕಾಣಿಸಿಕೊಳ್ಳಲಿದ್ದು ಯಾವ ಶೋ ಎಂದು ಕಾದು ನೋಡಬೇಕಿದೆ..