ಆನಂದ್ ಗುರೂಜಿಗೆ ಬಂತು ಬೆದರಿಕೆ ಪತ್ರ.. ಭದ್ರತೆ ಒದಗಿಸುವ ಭರವಸೆ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪನವರು..

ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ಬೆದರಿಕೆ ಒಅತ್ರ ಬಂದಿದ್ದು, ಸದ್ಯ ಮುಖ್ಯಮಂತ್ರಿಗಳ ಬಳಿ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಬೆಳಿಗ್ಗೆ ನೇರ ಮಹರ್ಷಿ ವಾಣಿ ಎಂಬ ನೇರ ಪ್ರಸಾರದ ಕಾರ್ಯಕ್ರಮ ನಡೆಸಿಕೊಡುವ ಆನಂದ್ ಗುರೂಜಿ ಅವರು ಧರ್ಮ, ದೇವರು, ಪೂಜೆ ಪುನಸ್ಕಾರದ ಜೊತೆಗೆ ದಿನದ ರಾಶಿ ಫಲವನ್ನು ತಿಳಿಸುತ್ತಾರೆ.. ಇದೆಲ್ಲದರ ಜೊತೆಗೆ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ, ಗೋವುಗಳ ಬಗ್ಗೆ ಮಾತನಾಡುತ್ತಾರೆ.. ಕೆಲ ದಿನಗಳ ಹಿಂದಷ್ಟೇ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯತ್ವ ವನ್ನು ಆನಂದ್ ಗುರೂಜಿ ಅವರಿಗೆ ನೀಡಲಾಗಿತ್ತು..

ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ‌ ನೀಡುವ ಆನಂದ್ ಗುರೂಜಿ ಅವರು ಅಲ್ಲಿಯೂ ವಿಶೇಷ ಪೂಜೆಗಳನ್ನು ನಡೆಸಿಕೊಡುತ್ತಾರೆ.. ಇದೆಲ್ಲದರ ಜೊತೆಗೆ ನ್ಯೂಸ್ ಚಾನಲ್ ಗಳ ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ಆನಂದ್ ಗುರೂಜಿ ಅವರು ಗ್ರಹಣ, ಹಬ್ಬ ಹೀಗೆ ವಿಶೇಷ ದಿನಗಳ ಮಾಹಿತಿಯನ್ನು ನೀಡೋದು ಉಂಟು.. ಸದ್ಯ ಕಿರುತೆರೆಯಲ್ಲಿ ಖ್ಯಾತಿ ಒಅಡೆದಿರುವ ಆನಂದ್ ಗುರೂಜಿ ಅವರಿಗೆ ಅಭಿಮಾನಿಗಳು ಇದ್ದಾರೆ..

ಇದೀಗ ಆನಂದ್ ಗುರೂಜಿ ಅವರಿಗೆ ಅನಾಮದೇಯ ಬೆದರಿಕೆ ಪತ್ರವೊಂದು ಬಂದಿದ್ದು, “ಇತ್ತೀಚೆಗೆ ಬಹಳ ಓಡಾಡುತ್ತೀರಿ.. ಧರ್ಮ ಸಂಸ್ಕೃತಿ ಅಂತ ಬಹಳ ಮಾತನಾಡುತ್ತೀರಿ.. ಎಚ್ಚರಿಕೆಯಿಂದಿರಿ” ಎಂದು ಬರೆದಿದ್ದು ಈ ಹಿಂದೆಯೂ ಸಾಕಷ್ಟು ಬೆದರಿಕೆಗಳು ಬಂದಿವೆಯಂತೆ..

ಇದು ಪುನರಾವರ್ತನೆಗೊಂಡದ್ದರಿಂದ ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಲಾಗಿದೆ.. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ..