ಧನಂಜಯ್ ಜೊತೆ ಮದುವೆ ವಿಚಾರ.. ಅಧಿಕೃತವಾಗಿ ತಿಳಿಸುವೆ ಎಂದು ನೇರವಾಗಿ ಹೇಳಿದ ನಟಿ ಅಮೃತಾ ಅಯ್ಯಂಗಾರ್..

ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆಗಿರುವ ಸಿನಿಮಾ ಬಡವ ರಾಸ್ಕಲ್ . ನಟ ರಾಕ್ಷಸ ಡಾಲಿ ಧನಂಜಯ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಸಹ ಮಾಡಿರುವ ಸಿನಿಮಾ ಇದು. ನಟಿ ತಾರಾ, ಅಚ್ಯುತ್ ರಾವ್, ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಣ ಮಾಡಿದ ಮೊದಲ ಸಿನಿಮಾದಲ್ಲೇ ಭರ್ಜರಿಯಾದ ಯಶಸ್ಸು ಪಡೆದಿದ್ದಾರೆ ನಟ ಧನಂಜಯ್. ಸಿನಿಮಾದ ಹಾಡುಗಳು, ಡೈಲಾಗ್ ಎಲ್ಲವೂ ಬಹಳ ಫೇಮಸ್ ಆಗಿದೆ. ಈ ಅಂಶಗಳ ಜೊತೆ ಬಡವ ರಾಸ್ಕಲ್ ಸಿನಿಮಾದಲ್ಲಿ ಎಲ್ಲರೂ ಇಷ್ಟಪಟ್ಟಿರುವುದು ಧನಂಜಯ್ ಮತ್ತು ಅಮೃತಾ ನಡುವಿನ ಲವ್ ಟ್ರ್ಯಾಕ್. ಇದೇ ಮೊದಲ ಬಾರಿಗೆ ಅಮೃತಾ ಮತ್ತು ಧನಂಜಯ್ ಜೊತೆಯಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸುಂದರವಾಗಿ ವರ್ಕ್ ಔಟ್ ಆಗಿದೆ.

ಧನಂಜಯ್ ಅವರು ಸಾಫ್ಟ್ ವೇರ್ ಕೆಲಸ ಬಿಟ್ಟು ನಟನೆಗೆ ಬಂದರು. ಆರಂಭದ ದಿನಗಳಲ್ಲಿ ಅವಕಾಶಗಳಿಗಾಗಿ ಕಷ್ಟಪಟ್ಟು ನಂತರ ಸಿನಿಮಾಗಳಲ್ಲಿ ನಟಿಸಿ ಅವಮಾನ ಅನುಭವಿಸಿದ್ದರು. ಇವರಿಗೆ ಸೆಕೆಂಡ್ ಇನ್ನಿಂಗ್ಸ್ ನ ಹಾಗೆ ದೊಡ್ಡ ಹಿಟ್ ಸಿಕ್ಕಿದ್ದು ಟಗರು ಸಿನಿಮಾದಲ್ಲಿನ ವಿಲ್ಲನ್ ಪಾತ್ರದ ಮೂಲಕ. ಟಗರು ನಂತರ ಧನಂಜಯ್ ಅವರ ಲಕ್ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿ, ವಿಲ್ಲನ್ ಆಗಿ ನಟಿಸಿದರು. ಪುಷ್ಪ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ ನಟ ಧನಂಜಯ್. ಈಗ ಬಡವ ರಾಸ್ಕಲ್ ಸಿನಿಮಾ ತೆಲುಗಿನಲ್ಲಿ ಸಹ ಬಿಡುಗಡೆಯಾಗಲು ಸಿದ್ಧವಾಗಿದೆ.

ಇನ್ನು ನಟಿ ಅಮೃತಾ ಅವರ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ಚಂದನವನಕ್ಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿರುವ ಇವರು, ಲವ್ ಮಾಕ್ಟೇಲ್ ಸಿನಿಮಾ ಇಂದ ಜನಪ್ರಿಯತೆ ಪಡೆದುಕೊಂಡರು. ಲಾವ್ ಮಾಕ್ಟೇಲ್ ಯಶಸ್ಸಿನಿಂಡ್ ಇವರಿಗೆ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಧ ಸಿಗುತ್ತಿದೆ. ಅಮೃತಾ ಅವರು ಒಳ್ಳೆಯ ನಟಿ, ತಮಗೆ ಸಿಗುವ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕನ್ನಡಡ್ಸ್ ಹುಡುಗಿ, ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಹಾಗಾಗಿ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಇವರು ಚಂದನವನದ ಸ್ಟಾರ್ ಹೀರೋಯಿನ್ ಆಗಿ ಮಿಂಚುವುದರಲ್ಲಿ ಯಾವುದೇ ಸಂಶಯ ಇಲ್ಲ.

ಈಗ ನಮ್ಮ ಗಾಂಧಿನಗರದಲ್ಲಿ ಈ ಇಬ್ಬರು ಕಲಾವಿದರು, ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಬಗ್ಗೆ ಒಂದು ಗಾಸಿಪ್ ಜೋರಾಗಿಯೇ ಹರಿದಾಡುತ್ತಿದೆ. ಅದೇನೆಂದರೆ, ನಟಿ ಅಮೃತಾ ಮತ್ತು ಧನಂಜಯ್ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ. ಇಬ್ಬರು ಶೀಘ್ರದಲ್ಲೇ ಮದುವೆ ಸಹ ಆಗುತ್ತಾರೆ ಎನ್ನುವ ವಿಚಾರ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ವಿಚಾರ ಹೆಚ್ಚಾಗಿ ಸುದ್ದಿಯಾಗಿದ್ದು ಜೀಕನ್ನಡ ವಾಹಿನಿಯ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಧನಂಜಯ್ ಅವರು ಅಮೃತಾ ಅವರಿಗೆ ಪ್ರೊಪೋಸ್ ಮಾಡಿದಾಗಿನಿಂದ. ಕಳೆದ ವಾರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೆ ನಟ ಧನಂಜಯ್ ಅವರ ಫ್ರೆಂಡ್ಸ್ ಗ್ಯಾಂಗ್ ಬಂದಿದ್ದರು.

ನಟಿ ಅಮೃತಾ ಅಯ್ಯಂಗಾರ್ ಅವರು ಸಹ ಕಾರ್ಯಕ್ರಮಕ್ಕೆ ಬಂದಿದ್ದರು, ಶೋನಲ್ಲಿ ಧನಂಜಯ್ ಅವರು ಸುಂದರವಾದ ಕವಿತೆಯ ಮೂಲಕ ಅಮೃತಾ ಅವರಿಗೆ ಪ್ರೊಪೋಸ್ ಮಾಡಿದರು. ಅಮೃತಾ ಅವರು ಕೂಡ ಧನಂಜಯ್ ಅವರು ಜೀವನ ಪೂರ್ತಿ ಚಿತ್ರಾನ್ನ ಮಾಡಿಕೊಡುತ್ತೇನೆ ಎಂದು ಪ್ರೊಪೋಸ್ ಮಾಡಿದರು. ಈ ದೃಶ್ಯ ನೋಡಲು ಬಹಳ ಮುದ್ದಾಗಿತ್ತು. ಗೋಲ್ಡನ್ ಗ್ಯಾಂಗ್ ಪ್ರೋಮೋದಲ್ಲಿ ಹಾಗೂ ಇವರೆಲ್ಲರೂ ಬಂದಿದ್ದ ಸಂಚಿಕೆಯಲ್ಲಿ ಈ ಪ್ರೊಪೋಸ್ ಮಾಡಿದ ಸನ್ನಿವೇಶ ದೊಡ್ಡ ಹೈಲೈಟ್ ಆಯಿತು. ಇದರಿಂದಲೇ ಧನಂಜಯ್ ಮತ್ತು ಅಮೃತಾ ನಿಜವಾಗಿಯೂ ಇಷ್ಟಪಡುತ್ತಿದ್ದಾರೆ, ಇಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿವೆ.

ಇದರ ಬಗ್ಗೆ ಸ್ವತಃ ಅಮೃತಾ ಅಯ್ಯಂಗಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮೊನ್ನೆಯಷ್ಟೇ ಲವ್ ಮಾಕ್ಟೇಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಸುದ್ದಿಗೋಷ್ಠಿ ನಡೆಯಿತು, ಅದರಲ್ಲಿ ಅಮೃತಾ ಅವರು ಮಾತನಾಡುವಾಗ, ಪ್ರೊಪೋಸ್ ಮಾಡಿದ ಸನ್ನಿವೇಶದ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅಮೃತಾ ಅವರು, “ಜೀಕನ್ನಡದವರು ಪ್ರೋಮೋ ಕಟ್ ಮಾಡಿದಾಗ ನನಗೂ ಸಾಕಷ್ಟು ಜನ ಕಾಲ್ ಮಾಡಿದ್ರು. ಮಾಧ್ಯಮದಲ್ಲಿ ಹೇಗೆ ಬ್ರೇಕಿಂಗ್ ನ್ಯೂಸ್ ಅಂತ ತೋರಿಸುತ್ತಾರೆ, ಸುದ್ದಿ ತೆಗೆದು ಓದಿದ್ರೆ ಟಾಸ್ಕ್ ಅಂತ ಗೊತ್ತಾಗುತ್ತೆ, ನಾನು ಅದೇ ರೀತಿ ಹೇಳುವ ಹಾಗೆ ಆಗಿತ್ತು. ಅದು ಜೀಕನ್ನಡ ವಾಹಿನಿಯ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಕೊಟ್ಟಂತಹ ಒಂದು ಟಾಸ್ಕ್..”

“ಧನಂಜಯ್ ಅವರು ಯಾವುದಾದರೂ ಒಂದು ವಿಚಾರದಲ್ಲಿ ಲ್ಯಾಗ್ ಇರ್ತಾರೆ ಅದು ಯಾವ್ದು ಅಂತ ಕೇಳಿದ್ರು. ಅದಕ್ಕೆ ನಾನು, ಇಲ್ಲ ಅವರು ಸಿನಿಮಾದಲ್ಲಿ ರೊಮ್ಯಾಂಟಿಕ್ ಸೀನ್ಸ್ ಮಾಡುವಾಗ ಸ್ವಲ್ಪ ನಾಚಿಕೊಳ್ತಾ ಇದ್ರು ಅಂತ ಹೇಳಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು, ರೊಮ್ಯಾಂಟಿಕ್ ಸೀನ್ ನಲ್ಲಿ ನೀವು ನಾಚಿಕೊಳ್ಳುತ್ತೀರಂತಲ್ಲ, ಇಲ್ಲಿ ಆ ಸ್ಟಿಗ್ಮಾ ಬ್ರೇಕ್ ಆಗ್ಲಿ ಅಂತ ಪ್ರೊಪೋಸ್ ಮಾಡುವ ಸೀನ್ ಮಾಡಿಸಿದ್ರು. ಅದು ಪ್ರೋಮೋ ಯಾವ ಥರ ಕಟ್ ಆಗಿತ್ತು ಅಂದ್ರೆ, ತುಂಬಾ ಜನ ಕಂಗ್ರಾಟ್ಸ್ ಅಂತ ನನಗೆ ಮೆಸೇಜ್ ಮಾಡಿದ್ರು. ಸೋ ಖಂಡಿತ ಇಲ್ಲ. ಈಗ ತಾನೇ ಕೆರಿಯರ್ ಶುರು ಮಾಡಿದ್ದೀನಿ, ಕಣ್ಣು ಬಿಡುತ್ತಾ ಇದ್ದೀನಿ. ಆ ಥರಾ ಏನೇ ಇದ್ರು ನನ್ನ ಕಡೆಯಿಂದಾನೆ ಅಧಿಕೃತ ಮಾಹಿತಿ ಬರುತ್ತೆ. ಅದು ವೇದಿಕೆಯಲ್ಲಿ ನಡೆದ ಒಂದು ಟಾಸ್ಕ್ ಏನೇ ಇದ್ರು ನಾನೇ ಅಧಿಕೃತವಾಗಿ ತಿಳಿಸ್ತೀನಿ..”

“ಆಗ ನನಗೆ ಶಾಕ್ ಆಗಿತ್ತು, ಸಿನಿಮಾದಲ್ಲಿ ಯಾವತ್ತೂ ಈ ಥರ ಕಂಫರ್ಟಬಲ್ ಆಗಿ ಮಾಡಿರಲಿಲ್ಲ, ಟಾಸ್ಕ್ ನ ಇಷ್ಟು ಸೀರಿಯಸ್ ಆಗಿ ತಗೊಂಡು ಮಾಡ್ತಿದ್ದಾರೆ ಅಂತ ನಾನು ಶಾಕ್ ಆಗಿದ್ದೆ. ಗೋಲ್ಡನ್ ಗ್ಯಾಂಗ್ ಅನ್ನೋದು ಒಂದು ಫನ್ ಇರುವಂಥ ಶೋ..ಅದರಲ್ಲಿ ನಾವು ಫನ್ ತರಬೇಕಿತ್ತು. ಹಾಗೆ ಮಾಡಿದ್ವಿ ಅಷ್ಟೇ. ಅದರಲ್ಲಿ ನಾನು ಚಿತ್ರಾನ್ನ ಮಾಡಿಕೊಡ್ತೀನಿ ಅಂತ ಎಲ್ಲಾ ಹೇಳಿದ್ದೀನಿ. ಅದೆಲ್ಲ ಪ್ರೊಪೋಸ್ ಮಾಡುವ ಲೈನ್ಸ್ ಗಳಲ್ಲ, ಇದೆಲ್ಲವೂ ಫನ್ ಗಾಗಿ ಮಾಡಿದ್ದು ಅಷ್ಟೇ..” ಎಂದು ಹೇಳಿ ಮದುವೆ ಗಾಸಿಪ್ ಗೆ ಸ್ಪಷ್ಟನೆ ನೀಡಿದ್ದಾರೆ ನಟಿ ಅಮೃತಾ ಅಯ್ಯಂಗಾರ್.