ಅದ್ಧೂರಿಯಾಗಿ ನೆರವೇರಿತು ಅಮೂಲ್ಯ ಸೀಮಂತ.. ಸ್ಯಾಂಡಲ್ವುಡ್ ನ ತಾರೆಯರು ಬಂದು ಹಾರೈಸಿದ ರೀತಿ ನೋಡಿ.

ಚಂದನವನಕ್ಕೆ ಬಾಲಿನಟಿಯಾಗಿ ಎಂಟ್ರಿ ಕೊಟ್ಟು ಇಂದು ಅಭಿಮಾನಿಗಳ ಮನಸ್ಸಿನಲ್ಲಿ ಗೋಲ್ಡನ್ ಕ್ವೀನ್ ಆಗಿಯೇ ಸ್ಥಾನ ಗಳಿಸಿರುವವರು ನಟಿ ಅಮೂಲ್ಯ. ಚಿಕ್ಕವಯಸ್ಸಿನಿಂದಲೂ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರಣ ಎಲ್ಲರಿಗೂ ಇವರ ಮೇಲೆ ತುಂಬಾ ಪ್ರೀತಿ ಇದೆ. ಚಂದನವನದ ಬಹುತೇಕ ಎಲ್ಲಾ ಕಲಾವಿಡದು ಅಮೂಲ್ಯ ಅವರನ್ನು ಇನ್ನು ಪುಟ್ಟ ಮಗುಗಿನ ಹಾಗೆ ಕಾಣುತ್ತಾರೆ. ಈಗ ಆ ಮಗುವಿಗೆ ಮಗುವಾಗುತ್ತಿದೆ. ಪ್ರಸ್ತುತ ಅಮೂಲ್ಯ ತುಂಬು ಗರ್ಭಿಣಿ. ಇನ್ನೇನು ಕೆಲವೆ ದಿನಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇತ್ತೀಚೆಗೆ ಅಮೂಲ್ಯ ಸೀಮಂತ ಶಾಸ್ತ್ರ ನಡೆದಿತ್ತು, ಇದೀಗ ಚಿತ್ರರಂಗದವರು ಸೇರಿ ಮತ್ತೊಮ್ಮೆ ಅದ್ಧೂರಿಯಾಗಿ ಅಮೂಲ್ಯ ಅವರ ಸೀಮಂತ ಶಾಸ್ತ್ರ ನಡೆಸಿದ್ದಾರೆ. ಗಣ್ಯ ಕಲಾವಿದೆಯರು, ಹಿರಿಯರು ಎಲ್ಲರೂ ಈ ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ. ಅಮೂಲ್ಯ ಸೀಮಂತ ಶಾಸ್ತ್ರ ಹೇಗಿತ್ತು ಎಂದು ತಿಳಿಸುತ್ತೇವೆ ನೋಡಿ..

ನಟಿ ಅಮೂಲ್ಯ ಪರ್ವ ಸಿನಿಮಾ ಮೂಲಕ ಬಾಲನಟಿಯಾಗಿ ಮೊದಲ ಬಾರಿಗೆ ಅಭಿನಯ ಮಾಡಿದರು. ಮೊದಲ ಸಿನಿಮಾದಲ್ಲೇ ದಿಗ್ಗಜರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ ಅಭಿನಯಿಸಿದರು. ನಂತರ ಅಮೂಲ್ಯ ಅವರು ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ದರ್ಶನ್, ಸುದೀಪ್ ಎಲ್ಲರ ಸಿನಿಮಾಗಳಲ್ಲೂ ಅಮೂಲ್ಯ ನಟಿಸಿದ್ದಾರೆ. ಒಂದು ಸಮಯದ ನಂತರ್ಸ್ ಚಿತ್ರರಂಗದಿಂದ ಹರೆಕ್ ತೆಗೆದುಕೊಂಡ ನಟಿ ಅಮೂಲ್ಯ, ಮತ್ತೊಮ್ಮೆ ರೀ ಎಂಟ್ರಿ ಕೊಟ್ಟಿದ್ದು ಹೀರೋಯಿನ್ ಆಗಿ. ಅದು ಚೆಲುವಿನ ಚಿತ್ತಾರ ಸಿನಿಮಾ ಮೂಲಕ.

ಸ್ಯಾಂಡಲ್ ವುಡ್ ನಲ್ಲಿ ಈ ಸಿನಿಮಾ ಎಷ್ಟು ದೊಡ್ಡ ಕ್ರೇಜ್ ಸೃಷ್ಟಿ ಮಾಡಿತ್ತು ಎನ್ನುವುದು ನಮಗೆಲ್ಲ ಗೊತ್ತಿದೆ. ಎಷ್ಟೊಂದು ಆಟೋಗಳ ಮೇಲು ಅಮೂಲ್ಯ ಎಂದು ಅವರ ಹೆಸರನ್ನೇ ನೋಡುವ ಹಾಗಿತ್ತು. 8ನೇ ತರಗತಿ ಓದುವಾಗಲೇ, ಮೊದಲ ಸಿನಿಮಾ ಮೂಲಕ ಕರ್ನಾಟಕದ ಕ್ರಶ್ ಆಗಿ ದೊಡ್ಡ ಸೆನ್ಸೇಷನ್ ಆಗಿದ್ದರು ಅಮೂಲ್ಯ. ಚೆಲುವಿನ ಚಿತ್ತಾರ ನಂತರ, ಒಂದು ಬ್ರೇಕ್ ಪಡೆದು ಚೈತ್ರದ ಚಂದ್ರಮ ಸಿನಿಮಾದಲ್ಲಿ ಅಭಿನಯಿಸಿದರು. ನಂತರ 10ನೇ ತರಗತಿ ಮುಗಿಸಿ, ಸಿನಿಮಾಗಳಲ್ಲಿ ನಟಿಸುವುದನ್ನು ಮತ್ತೆ ಶುರು ಮಾಡಿದರು. ಕಾಲೇಜಿನಲ್ಲಿ ಓದುವುದರ ಜೊತೆಗೆ ಸಿನಿಮಾವನ್ನು ಮಾಡುತ್ತಿದ್ದರು ಅಮೂಲ್ಯ.

ಹೀರೋಯಿನ್ ಆಗಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡರು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಗೋಲ್ಡನ್ ಕ್ವೀನ್ ಆದ ಅಮೂಲ್ಯ, ಅವರ ಜೊತೆಯಲ್ಲಿ ಮೂರು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡರು. ಬಳಿಕ ಅಮೂಲ್ಯ ಅವರು ನಟ ಪ್ರೇಮ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ಯಶ್ ಹಾಗೂ ಇನ್ನೆಲ್ಲ ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ತೆರೆಹಂಚಿಕೊಂಡರು. ಬಹಳ ಬೇಗ 2017ರಲ್ಲಿ ದಾಂಪತ್ಯ ಜೀವನಕ್ಕೂ ಕಾಲಿಟ್ಟರು ಅಮೂಲ್ಯ. ಅಮೂಲ್ಯ ಅವರ ಮದುವೆ ನಡೆಯಲು ಮುಖ್ಯ ಕಾರಣ ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್.

ರಾಜಕೀಯದಲ್ಲಿ ಸಕ್ರಿಯವಾಗಿರುವ ಕುಟುಂಬದ ಮಗ ಜಗದೀಶ್ ಅವರ ಜೊತೆ ಅಮೂಲ್ಯ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಎಲ್ಲಾ ಹುಡುಗಿಯರ ಕನಸಿನ ಮದುವೆ ಆಗಿತ್ತು ಈ ಮದುವೆ. ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಅಮೂಲ್ಯ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ಬದಲಿಗೆ ಗಂಡನ ಜೊತೆ ಸೇರಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡರು. ಅದರಲ್ಲು ಲಾಕ್ ಡೌನ್ ಶುರುವಾದ ನಂತರ ಬಹಳಷ್ಟು ಜನರಿಗೆ ಸಹಾಯ ಮಾಡಿದರು, ಲಕ್ಷಾಂತರ ಜನರಿಗೆ ಮಾಸ್ಕ್ ವಿತರಣೆ ಮಾಡಿದ್ದರು. ಅಮೂಲ್ಯ ಅವರ ಕಡೆಯಿಂದ ಸಿಹಿ ಸುದ್ದಿ ಯಾವಾಗ ಬರುತ್ತದೆ ಎಂದೇ ಅವರ ಅಭಿಮಾನಿಗಳು ಕಾಯುತ್ತಿದ್ದರು.

ಅದೇ ರೀತಿ ಇತ್ತೀಚೆಗಷ್ಟೇ ನಟಿ ಅಮೂಲ್ಯ ತಾವು ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದರು. ಎಲ್ಲಾ ಅಭಿಮಾನಿಗಳು ಸಹ ಈ ವಿಚಾರ ತಿಳಿದು ಸಂತೋಷವಾಗಿ ಅಮೂಲ್ಯ ಅವರಿಗೆ ಮತ್ತು ಹುಟ್ಟಿಬರುವ ಮಗುವಿಗೆ ಒಳ್ಳೆಯದಾಗಲಿ, ಇಬ್ಬರ ಆರೋಗ್ಯವು ಚೆನ್ನಾಗಿರಲಿ ಎಂದು ಹಾರೈಸಿದರು. ಕೆಲ ದಿನಗಳ ಹಿಂದೆಯಷ್ಟೇ ಶಾಸ್ತ್ರೋಕ್ತವಾಗಿ ಅಮೂಲ್ಯ ಅವರ ಸೀಮಂತ ಶಾಸ್ತ್ರ ನೆರವೇರಿತು. ಕುಟುಂಬದವರು, ಆಪ್ತರು, ಸ್ನೇಹಿತರು ಎಲ್ಲರೂ ಸೇರಿ ಅಮೂಲ್ಯ ಅವರ ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು. ಅದಾದ ಬಳಿಕ ಅಮೂಲ್ಯ ಅವರ ಸ್ನೇಹಿತೆಯರು ಸರ್ಪ್ರೈಸ್ ಪಾರ್ಟಿ ನೀಡಿದ್ದರು.

ಇದೀಗ ಚಿತ್ರರಂಗದ ಗಣ್ಯರು ಅಮೂಲ್ಯ ಅವರ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಈ ಸುಂದರ ಸಮಾರಂಭದಲ್ಲಿ ಅಮೂಲ್ಯ ಅವರ ಪತಿ ಜಗದೀಶ್, ಹಿರಿಯನಟಿ ಭಾರತಿ ವಿಷ್ಣುವರ್ಧನ್, ಅವರ ಅಳಿಯ ಮತ್ತು ಮಗಳು, ನಟ ಗಣೇಶ್ ಅವರ ಕುಟುಂಬ, ಹಿರಿಯನಟಿಯರಾದ ಮಾಳವಿಕಾ, ಸುಧಾರಾಣಿ ಮತ್ತು ಶ್ರುತಿ. ಸುಧಾರಾಣಿ ಮತ್ತು ಶ್ರುತಿ ಅವರ ಮಕ್ಕಳು. ನಟಿ ರಾಧಿಕಾ ಪಂಡಿತ್ ಮತ್ತು ಅವರ ತಾಯಿ. ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಕುಟುಂಬ, ನಟಿ ಹರಿಪ್ರಿಯಾ ಹೀಗೆ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಅಮೂಲ್ಯ ಅವರ ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು. ತಮ್ಮ ಮುಂದೆ ಆಡಿ ಬೆಳೆದ ಹುಡುಗಿಗೆ ಈ ರೀತಿಯ ಸುಂದರ ಕ್ಷಣವನ್ನು ನೀಡಿದ ನಮ್ಮ ಕನ್ನಡ ಚಿತ್ರರಂಗದ ಕಲಾವಿದರ ಎಷ್ಟು ಒಳ್ಳೆಯದು ಎಂದು ಈ ಮೂಲಕ ಗೊತ್ತಾಗುತದೆ.