ಬ್ರೇಕಿಂಗ್ ನ್ಯೂಸ್..‌ ಐಶ್ವರ್ಯಾ ರೈ ಹಾಗೂ ಮಗಳಿಗೂ ಕೊರೊನಾ ಪಾಸಿಟಿವ್..

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕಾರಣಿಗಳು ಸೆಲಿಬ್ರೆಟಿಗಳು ಕಲಾವಿದರೂ ಸಹ ಇದೀಗ ಸಾಲು ಸಾಲಾಗಿ ಕೊರೊನಾಗೆ ತುತ್ತಾಗುತ್ತಿದ್ದಾರೆ.. ಹೌದು ನಿನ್ನೆಯಷ್ಟೇ ಬಿಗ್ ಬಿ‌ ಅಮಿತಾಬ್ ಬಚ್ಚನ್ ಅವರಿಗೆ ಹಾಗೂ ಅಭಿಷೇಕ್ ಅವರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದ್ದು, ದೇಶವೇ ಬಿಗ್ ಬಿ ಆದಷ್ಟು ಬೇಗ ಗುಣಮುಖರಾಗಲಿ‌ ಎಂದು ಪ್ರಾರ್ಥಿಸಿತ್ತು.. ಆದರೀಗ ಬಿಗ್ ಬಿ ಕುಟುಂಬಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ.. ಹೌದು ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.. ಆದರೆ ಇಬ್ಬರಿಗೂ ಇದೀಗ ಸೋಂಕು ಇರುವುದು ಧೃಡಪಟ್ಟಿದೆ..

ನಿನ್ನೆ ರಾತ್ರಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಂದೆ ಅಮಿತಾಬ್ ಬಚ್ಚನ್ ಬಳಿಕ ಟ್ವೀಟ್ ಮಾಡಿದ್ದ ಅಭಿಷೇಕ್ ತಮ್ಮ ವರದಿಯೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ತಗುಲಿರುವುದು ಖಚಿತವಾಗಿದೆ..

ಈಗಾಗಲೇ ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗುವುದು ಬೇಡ. ನಾವು ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಬಚ್ಚನ್ ಕುಟುಂಬ ಹೇಳಿದೆ. ಇನ್ನು ಬಿಗ್ ಬಿ ಪತ್ನಿ ಜಯಾ ಬಚ್ಚನ್ ವರದಿ ಬರುವುದು ಬಾಕಿ‌ ಇದೆ..