ತುಂಬಿದ ವೇದಿಕೆಯಲ್ಲಿ ಐಶ್ವರ್ಯಾ ರೈ ಅವರನ್ನು ಬಿಟ್ಟು ಹೊರ ನಡೆದು ಅವಮಾನಿಸಿದ್ದ ಅಭಿಷೇಕ್.. ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿ ಹೋಗಿತ್ತು..

ಸೆಲಿಬ್ರೆಟಿ ಜೋಡಿ ಎಂದ ಮಾತ್ರಕ್ಕೆ ಸದಾ ಸಂತೋಷವಾಗೇ ಇರುತ್ತಾರೆ ಎಂದೇನಿಲ್ಲ.. ಅವರೂ ಕೂಡ ಸಾಮಾನ್ಯ ಮನುಷ್ಯರೆ.. ಅವರ ನಡುವೆಯೂ ಆಗಾಗ ಭಿನ್ನಾಭಿಪ್ರಾಯ ಮೂಡುತ್ತಿರುತ್ತದೆ.. ಆದರೆ ಸೆಲಿಬ್ರೆಟಿಗಳ ಮನಸ್ತಾಪಗಳು ಮನೆಯಿಂದ ಹೊರ ಬಂದರೆ ಅದು ದೊಡ್ಡ ಸುದ್ದಿಯಾಗುತ್ತದೆ.. ಅದೇ ರೀತಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವೀಡಿಯೋವೊಂದು ವೈರಲ್ ಆಗಿದ್ದು, ಐಶ್ವರ್ಯಾ ರೈ ಅವರನ್ನು ಅವಮಾನಿಸಿದ ಪ್ರಸಂಗ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿ ಹೋಗಿದೆ..

ಹೌದು ಸರಬ್ಜಿತ್ ಸಿನಿಮಾದ ಪ್ರೀಮಿಯರ್ ಶೋ ನ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರೊಡನೆ ನಿಲ್ಲದೇ ಅಭಿಷೇಕ್ ಬಚ್ಚನ್ ಅವರು ದೂರ ದೂರ ಹೋಗುತ್ತಿದ್ದದ್ದು, ಐಶ್ವರ್ಯಾ ರೈ ಅವರ ಪಕ್ಕದಲ್ಲಿ ಬೇರೆ ಹುಡುಗನನ್ನು ನಿಲ್ಲಿಸಿದ್ದು ವೀಡಿಯೋ ರೆಕಾರ್ಡ್ ಆಗಿದೆ.. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಐಶ್ವರ್ಯಾ ರೈ ಅವರು ಸಂದರ್ಭವನ್ನು ಮ್ಯಾನೆಜ್ ಮಾಡುತ್ತಿದ್ದ ರೀತಿಯೂ ಎದ್ದು ಕಾಣುತ್ತಿದ್ದು, ಕೊನೆಗೂ ಜೊತೆಯಲ್ಲಿ ಒಂದು ಫೋಟೊ ತೆಗೆಸಿಕೊಂಡು ಐಶ್ವರ್ಯ ಅವರನ್ನು ಅಲ್ಲಿಯೇ ಬಿಟ್ಟು ಅಭಿಷೇಕ್ ಅವರು ಆ ಜಾಗದಿಂದ ಹೊರ ನಡೆದಿದ್ದರು.‌. ಅಭಿಷೇಕ್ ಅವರ ಆ ನಡವಳಿಕೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.. ಕೆಳಗಿನ ವೀಡಿಯೋ ನೋಡಿ..

ಆನಂತರ ಈ ಬಗ್ಗೆ ಮೀಡಿಯಾದವರು ಅಭಿಷೇಕ್ ಬಚ್ಚನ್ ಅವರನ್ನು ಪ್ರಶ್ನಿಸಿದ್ದಕ್ಕೆ ಇದಕ್ಕೆಲ್ಲಾ ನಿಮಗೆ ಉತ್ತರ ನೀಡುವ ಅಗತ್ಯವಿಲ್ಲ.. ನೀವು ಇದನ್ನೆಲ್ಲಾ ಯಾಕೆ ಕೇಳ್ತಿದ್ದೀರಾ ಅಂತ ನನಗೆ ಗೊತ್ತು.. ಇನ್ನು ಮದುವೆ ಆಗಿದೆ ನೋಡಿ ಎಂದು ಕೈಯಲ್ಲಿದ್ದ ವೆಡ್ಡಿಂಗ್ ರಿಂಗ್ ಅನ್ನು ಮಾದ್ಯಮದವರಿಗೆ ತೋರಿಸಿ ಹೊರನಡೆದರು..