ಡಿಕೆಶಿ ಮಗಳ ಮದುವೆ ಸಂಭ್ರಮ.. ಫೋಟೋ ಗ್ಯಾಲರಿ‌ ನೋಡಿ..

ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಮನೆ ಮಾಡಿದೆ.. ಹೌದು ಈ ಹಿಂದೆ ಸುದ್ದಿಯಾದಂತೆ ಕಾಫಿ ಡೇ ಸಿದ್ದಾರ್ಥ್ ಅವರ ಮಗ, ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಗಡೆ ಅವರೊಂದಿಗೆ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ದಾಂಪತ್ಯ ಜೀವನಕ್ಕೆ‌ ಕಾಲಿಡುವ ಸುದ್ದಿ ಇದೀಗ ಅಧಿಕೃತ ಗೊಂಡಿದೆ..

ಹೌದು ಕಳೆದ ವರ್ಷ ಜುಲೈ ನಲ್ಲಿ ಸಿದ್ದಾರ್ಥ್ ಅವರ ಘಟನೆ ನಡೆದಿದ್ದರಿಂದ ಒಕ್ಕಲಿಗ ಸಂಲ್ರದಾಯದಲ್ಲಿ ಕೆಲ ಮನೆತನಗಳಲ್ಲಿ ವರ್ಷ ತುಂಬುವುದರೊಳಗೆ ಒಂದು ಶುಭ ಕಾರ್ಯ ಮಾಡ ಬೇಕು.. ಇಲ್ಲವಾದಲ್ಲಿ ಮೂರು ವರ್ಷ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ.. ಅದೇ ಕಾರಣಕ್ಕೆ ಸಿದ್ದಾರ್ಥ್ ಅವರ ಮಗನ ಮದುವೆ ನಡೆಸುವ ನಿರ್ಧಾರ ಮಾಡಿದ್ದಾರೆ..

ಸಿದ್ಧಾರ್ಥ್ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಆಪ್ತ ಸ್ನೇಹಿತರಾಗಿದ್ದರು.. ಅವರಿಲ್ಲವಾದಾಗ ಆ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದರು.. ಇದೀಗ ಸ್ನೇಹ ಸಂಬಂಧವಾಗುತ್ತಿದ್ದು, ಮಗಳನ್ನು ಅದೇ ಮನೆಗೆ ನೀಡುತ್ತಿದ್ದಾರೆ..

ಇನ್ನು ಲಾಕ್ ಡೌನ್ ಇರುವ ಕಾರಣ ಮದುವೆ ಮಾಡುವುದು ತಡವಾಗುವ ಕಾರಣ, ಜುಲೈ ಒಳಗೆ ಶುಭ ಕಾರ್ಯ ನಡೆಯಲೇ ಬೇಕಾದ್ದರಿಂದ ನಿನ್ನೆ ಎಸ್ ಎಂ ಕೃಷ್ಣ ಅವರ ಮನೆಗೆ ಡಿಕೆ ಶಿವಕುಮಾರ್ ಅವರ ಕುಟುಂಬ ಆಗಮಿಸಿ ವರ ನೋಡಿವ ಶಾಸ್ತ್ರ ಮುಗಿಸಿದ್ದು, ಮನೆಯಲ್ಲಿ ಶುಭ ಕಾರ್ಯವೊಂದು ನಡೆದಂತಾಗಿದೆ..

ಸದ್ಯದಲ್ಲಿಯೇ ನಿಶ್ಚಿತಾರ್ಥ ಕೂಡ ನೆರವೇರಲಿದ್ದು ಈ ವರ್ಷಾಂತ್ಯ ಅಥವಾ 2021 ಶುರುವಿನಲ್ಲಿ ಮದುವೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.. ಇನ್ನು ಐಶ್ವರ್ಯ ಅವರು ಇಂಜಿನಿಯರಿಂಗ್ ಮುಗಿಸಿದ್ದು ತಮ್ಮದೇ ಆದ ಕೆಲ ಉದ್ಯಮಗಳನ್ನು ನೋಡಿಕೊಳ್ಳುತ್ತಿದ್ದಾರೆ.. ಇತ್ತ ಅಮರ್ಥ್ಯ ಹೆಗ್ಗಡೆ ಅವರು ಅಮೇರಿಕಾದಲ್ಲಿ ಎಂಬಿಎ ಮುಗಿಸಿ ಮರಳಿ ತಾಯ್ನಾಡಿಗೆ ಬಂದು ಇಲಿ ತಂದೆ ಸಿದ್ದಾರ್ಥ್ ಹೆಗ್ಗಡೆಯವರ ವ್ಯವಹಾರಗಳನ್ನು‌‌ ನೋಡಿಕೊಳ್ಳುತ್ತಿದ್ದಾರೆ..

ಇಬ್ಬರೂ ಸಹ ದೊಡ್ಡವರು ನಿಶ್ಚಯ ಮಾಡಿರುವ ಮದುವೆ ಸಮ್ಮತಿಸಿದ್ದು ಸದ್ಯದಲ್ಲಿಯೇ ನೂತನ ಜೀವನಕ್ಕೆ ಕಾಲಿಡಲಿದ್ದಾರೆ..