ಅದ್ಧೂರಿಯಾಗಿ ನೆರವೇರಿತು ಡಿಕೆಶಿ ಮಗಳ ಹರಿಶಿಣ ಶಾಸ್ತ್ರ.. ಭಾವುಕರಾದ ಡಿಕೆಶಿ ಮಗಳಿಗೆ ಕೊಟ್ಟ ಉಡುಗೊರೆ ನೋಡಿ..

ಇದೇ ಫೆಬ್ರವರಿ 14 ರಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರು ಕಾಫಿ ಕಿಂಗ್ ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಬೆಂಗಳೂರಿನ ಕನ್ವೆನ್ಷನ್ ಹಾಲ್ ಒಂದರಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಲಿದೆ..

ಹೌದು 26 ವರ್ಷದ ಅಮರ್ತ್ಯ ಹೆಗ್ಡೆ ಸದ್ಯ ಅಮೇರಿಕಾದಲ್ಲಿ ಶಿಕ್ಷಣ ಮುಗಿಸಿ ತಾಯಿ ಮಾಳವಿಕಾ ಅವರೊಟ್ಟಿಗೆ ಕಾಫಿ ಡೇ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.. ಇತ್ತ 22 ವರ್ಷದ ಐಶ್ವರ್ಯಾ ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಡಿ ಕೆ ಶಿವಕುಮಾರ್ ಅವರು ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.. ಇಬ್ಬರೂ ಉದ್ಯಮದ ಕಡೆಗೆ ಆಸಕ್ತಿ ಹೊಂದಿದ್ದು ಮುಂದೆ ವ್ಯವಹಾರಗಳ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ..

ಇನ್ನು ಸದ್ಯ ಮದುವೆ ಸಮಾರಂಭಕ್ಕೆ ಎರಡು ದಿನಗಳು ಬಾಕಿಯಿದ್ದು ಎರಡೂ ಕುಟುಂಬಗಳಲ್ಲಿ ತಯಾರಿ ಮುಗಿದಿದೆ.. ಒಂದೊಂದೆ ಶಾಸ್ತ್ರಗಳು.. ಸಮಾರಂಭಗಳು ಸಂಪ್ರದಾಯ ಬದ್ಧವಾಗಿ ನೆರವೇರುತ್ತಿದೆ.. ಮದುವೆಗೆ ಇನ್ನು ಮೂರು ದಿನಗಳು ಬಾಕಿ ಇರುವಾಗ ನಿನ್ನೆ ಎರಡೂ ಮನೆಯಲ್ಲಿಯೂ ವಧು ವರನಿಗೆ ಹರಿಶಿಣ ಶಾಸ್ತ್ರ ನೆರವೇರಿದೆ..

ಎರಡು ದಿನಗಳ ಹಿಂದಷ್ಟೇ ಸ್ನೇಹಿತರಿಗಾಗಿ ಸಂಗೀತ್ ಕಾರ್ಯಕ್ರಮ ನೆರವೇರಿದ್ದು ಅಮರ್ತ್ಯ ಹಾಗೂ ಐಶ್ವರ್ಯಾ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.. ಇನ್ನು ಇದೀಗ ಅರಿಶಿಣ ಶಾಸ್ತ್ರದ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ..

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಯಾವುದಕ್ಕೂ ಕಡಿಮೆಯಾಗದಂತೆ ಮಗಳ ಅರಿಶಿಣ ಶಾಸ್ತ್ರಕ್ಕೆ ಡಿ ಕೆ ಶಿವಕುಮಾರ್ ಅವರು ಅದ್ಧೂರಿಯಾಗಿ ತಯಾರಿ ಮಾಡಿದ್ದರು.. ಕೊರೊನಾ ಕಾರಣದಿಂದಾಗಿ ಕುಟುಂಬದವರು ಹಾಗೂ ಆಪ್ತರನ್ನು ಮಾತ್ರ ಆಹ್ವಾನಿಸಿದ್ದು ಅವರುಗಳ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿದೆ..

ಮದುವೆ ಕಾರ್ಯಕ್ರಮ ಫೆಬ್ರವರಿ 14 ರಂದು ನೆರವೇರಲಿದ್ದು.. ಫೆಬ್ರವರಿ 17 ರಂದು ಅರತಕ್ಷತೆ ಕಾರ್ಯಕ್ರಮ ನೆರವೇರಲಿದೆ.. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರುಗಳು ಹಾಗೂ ರಾಜ್ಯದ ಗಣ್ಯರು ಆಗಮಿಸಲಿದ್ದಾರೆ ಎನ್ನಲಾಗಿದೆ.. ಎರಡು ದಿನಗಳ ಹಿಂದಷ್ಟೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ಎಲ್ಲರೂ ತಾವು ಇದ್ದಲ್ಲಿಯೇ ನನ್ನ ಮಗಳಿಗೆ ಆಶೀರ್ವಾದ ಮಾಡಿ.. ನಿಮ್ಮೆಲ್ಲರನ್ನು ಕರೆಯುವ ಆಸೆಯಿದೆ.. ಆದರೆ ಸದ್ಯದ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ.. ಎಲ್ಲರೂ ಇದ್ದಲ್ಲಿಯೇ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದರು..