ಶುರುವಾಯ್ತು ಡಿಕೆಶಿ ಮಗಳ ಮದುವೆ ಸಂಭ್ರಮ.. ಸಂಗೀತ್ ಕಾರ್ಯಕ್ರಮದಲ್ಲಿ ಐಶ್ವರ್ಯಾ ಜೊತೆ ಅಮರ್ತ್ಯ ಸಖತ್ ಡ್ಯಾನ್ಸ್..

ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಶಿವಕುಮಾರ್ ಅವರ ಮದುವೆ ಸಮಾರಂಭ ಇದೇ ತಿಂಗಳು ನಡೆಯಲಿದ್ದು ಎರಡೂ ಮನೆಗಳಲ್ಲಿಯೂ ಅದಾಗಲೇ ಸಕಲ ತಯಾರಿ ನಡೆದಿದೆ.. ಎರಡೂ ಕುಟುಂಬದಲ್ಲಿಯೂ ಸಂಭ್ರಮ ಮನೆಮಾಡಿದೆ ಎನ್ನಬಹುದು..

ಹೌದು ಕಳೆದ ಜೂನ್ ತಿಂಗಳಿನಲ್ಲಿಯೇ ಡಿ ಕೆ ಶಿವಕುಮಾರ್ ಅವರ ಮಗಳು ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ.. ಕಾಫಿ ಕಿಂಗ್ ಸಿದ್ದಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಅವರ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು.. ಸಿದ್ದಾರ್ಥ್ ಹೆಗ್ಡೆ ಹಾಗೂ ಡಿ ಕೆ ಶಿವಕುಮಾರ್ ಅವರು ಬಹಳ ಆತ್ಮೀಯ ಸ್ನೇಹಿತರಾಗಿದ್ದರು.. ಸಿದ್ದಾರ್ಥ್ ಅವರು ಇದ್ದಾಗಲೇ ಡಿಕೆ ಶಿವಕುಮಾರ್ ಅವರ ಕುಟುಂಬದ ಜೊತೆ ಸಂಬಂಧ ಬೆಳೆಸುವ ಮಾತು ಪ್ರಸ್ತಾಪವಾಗಿತ್ತು ಎನ್ನಲಾಗಿದೆ..

ಇನ್ನು ಸ್ನೇಹಿತ ಇಲ್ಲವಾದ ಬಳಿಕ ಆ ಕುಟುಂಬಕ್ಕೂ ಬಹಳ ಕಷ್ಟದ ಸಮಯದಲ್ಲಿ ಡಿಕೆ ಶಿವಕುಮಾರ್ ಅವರು ಬೆಂಬಲವಾಗಿ ನಿಂತಿದ್ದರು.. ನಂತರ ಒಂದು ವರ್ಷದ ಒಳಗೆ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ಮಾಡಲೇ ಬೇಕಾದ್ದರಿಂದ ಜೂನ್ ತಿಂಗಳಿನಲ್ಲಿಯೇ ಸರಳವಾಗಿ ಮನೆಯಲ್ಲಿಯೇ ನಿಶ್ಚಿತಾರ್ಥದ ಸಣ್ಣ ಸಮಾರಂಭ ನೆರವೇರಿಸಿದ್ದರು.. ನಂತರದಲ್ಲಿ ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಖಾಸಗಿ ಹೊಟೆಲ್ ನಲ್ಲಿ‌ನಿಶ್ಚಿತಾರ್ಥ ಸಮಾರಂಭ ನೆರವೇರಿದ್ದು ರಾಜಕೀಯ ಗಣ್ಯರು ಸೇರಿದಂತೆ ಸ್ಯಾಂಡಲ್ವುಡ್ ನ ಕೆಲ ಕಲಾವಿದರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

ಇದೀಗ ಇದೇ ತಿಂಗಳು ಫೆಬ್ರವರಿಯಲ್ಲಿ ಮದುವೆ ಸಮಾರಂಭ ನೆರವೇರಲಿದ್ದು ಅಮರ್ಥ್ಯ ಹಾಗೂ ಶಿವಕುಮಾರ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.. ಒಂದೊಂದೆ ಶಾಸ್ತ್ರಗಳು ಸಹ ನೆರವೇರುತ್ತಿದ್ದು ರಾಜ್ಯದಲ್ಲಿ ಇದುವರೆಗೂ ನಡೆದಿರುವ ಅದ್ಧೂರಿ ಮದುವೆಗಳ ಸಾಲಿಗೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಮದುವೆ ಕೂಡ ಸಾಕ್ಷಿಯಾಗಲಿದೆ..

ಇನ್ನು ಮದುವೆಯ ಭಾಗವಾಗಿ ಅಮರ್ತ್ಯ ಹಾಗೂ ಐಶ್ವರ್ಯಾರ ಸ್ನೇಹಿತರಿಗೆಲ್ಲಾ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಬ್ಬರ ಸ್ನೇಹಿತರು ಹಾಗೂ ಕಸಿನ್ ಗಳು ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸಿದ್ದಾರೆ.. ಇನ್ನು ಕಾರ್ಯಕ್ರಮದಲ್ಲಿ ಹಾಡು ಡ್ಯಾನ್ಸು ಎಲ್ಲವೂ ಇದ್ದು ಐಶ್ವರ್ಯಾ ತಮ್ಮ ಭಾವಿ ಪತಿ ಅಮರ್ತ್ಯ ಹೆಗ್ಡೆ ಜೊತೆ ಡ್ಯಾನ್ಸ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ.‌ ಜೊತೆಗೆ ಅಮರ್ತ್ಯ ಹೆಗ್ಡೆ ಮುಕ್ಕಾಲಾ ಮುಕ್ಕಾಬುಲ್ಲಾ ಹಾಡಿಗೆ ಸಖತ್ತಾಗೆ ಹೆಜ್ಜೆ ಹಾಕಿದ್ದು ಸ್ನೇಹಿತರು ಸಾಥ್ ನೀಡಿದ್ದಾರೆ..