ಸಿನಿಮಾ ರಂಗಕ್ಕೆ ಬರುವ ಮುನ್ನ ನಟಿ ಐಂದ್ರಿತಾ ರೈ ಮಾಡುತ್ತಿದ್ದ ಕೆಲಸ ಏನು ಗೊತ್ತಾ.. ಶಾಕ್ ಆಗ್ತೀರಾ..

ಸಿನಿಮಾ ರಂಗ ಅನ್ನೋದು ಒಂದು ರೀತಿಯ ಬಣ್ಣದ ಬದುಕು ಅನ್ನೋದು ಅಕ್ಷರಶಃ ಸತ್ಯದ ಮಾತು.. ಅದೆಷ್ಟೋ ಜನ ಇಲ್ಲಿಗೆ ಹೆಸರಿಗಾಗಿ ಬರುವರು.. ಮತ್ತಷ್ಟು ಮಂದಿ ಹಣ ಸಂಪಾದನೆಗಾಗಿ ಬರುವರು.. ಇನ್ನೊಂದಿಷ್ಟು ಜನ ಬದುಕು ಕಟ್ಟಿಕೊಳ್ಳಲು ಇದನ್ನೇ ದಾರಿ‌ ಮಾಡಿಕೊಳ್ಳುವರು.. ಮತ್ತಷ್ಟು ಮಂದಿ ಅದೃಷ್ಟದ ಮೇಲೆ ಬಂದವರೂ ಸಹ ಇದ್ದಾರೆ.. ಇಂತಹವರಲ್ಲಿ ಕೆಲವರು ಇಲ್ಲಿಯೇ ನೆಲೆಯೂರಿದರೆ ಮತ್ತೆ ಕೆಲವರಿಗೆ ಈ ಬಣ್ಣದ ಬದುಕು ಬಣ್ಣಗಳ ನೀಡದೇ ದೂರ ಕಳುಹಿಸಿದ್ದೂ ಉಂಟು.. ಬಂದ ದಾರಿಗೆ ಪ್ರಯೋಜನವಿಲ್ಲವೆಂದು ಸಿನಿಮಾ ಬಿಟ್ಟು ಬೇರೆ ಕೆಲಸ ಮಾಡುತ್ತಿರುವವರೂ ಇದ್ದಾರೆ..

ಇನ್ನು ಸಧ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ‌ ಸ್ಟಾರ್ ನಟ ನಟಿಯಾಗಿದ್ದವರು ಅನೇಕರು ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಬೇರೆ ಬೇರೆ ಕೆಲಸ ಮಾಡಿದವರೇ.. ಹೌದು ದರ್ಶನ್ ಅವರು ಸಿ‌ನಿಮಾ ನಟನ ಮಗಮಾದರೂ ಸಹ ಹಾಲು ವ್ಯಾಪಾರ ಮಾಡುತ್ತಿದ್ದರು.. ಆನಂತರ ಸಿನಿಮಾ ಇಂಡಸ್ಟ್ರಿಯಲ್ಲಿಯೇ ತಮ್ಮ ಜೀವನ ಕಟ್ಟಿಕೊಳ್ಳಬೇಕೆಂದು ಕಷ್ಟ ಪಟ್ಟು ಈ ಹಂತಕ್ಕೆ ಬಂದು ನಿಂತಿದ್ದಾರೆ.. ಇನ್ನು ಸುದೀಪ್ ಅವರು ಸಹ ಇಂಜಿನಿಯರ್ ಆಗಿದ್ದವರು ಅಪ್ಪನ ಹೊಟೆಲ್ ಉದ್ಯಮವನ್ನೂ ಸಹ ನೋಡಿಕೊಳ್ಳುತ್ತಿದ್ದರು.. ಇನ್ನು ಪುನೀತ್ ರಾಜ್ ಕುಮಾರ್ ಅವರೂ ಸಹ ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಗ್ರಾನೈಟ್ ಉದ್ಯಮ ಹೊಂದಿದ್ದರು.. ಇನ್ನು ನಟಿಯರು ಸಹ ಬೇರೆ ಬೇರೆ ವಿಧ್ಯಾಭ್ಯಾಸ ಮಾಡಿ ವೃತ್ತಿ ಬದುಕನ್ನೂ ಸಹ ಕಟ್ಟಿಕೊಂಡು ಆನಂತರ ಸಿನಿಮಾ ಇಂಡಸ್ಟ್ರಿಗೆ ಬಂದವರೂ ಇದ್ದಾರೆ.. ಕೆಲವರು ಆಸಕ್ತಿಯಿಂದ ಬಂದರೆ ಮತ್ತೆ ಕೆಲವರು ಅಚಾನಕ್ ಆಗಿ ಬಂದಿದ್ದಾರೆ..

ಇನ್ನು ಸ್ಯಾಂಡಲ್ವುಡ್ ನ ಖ್ಯಾತ ನಟಿ ಐಂದ್ರಿತಾ ರೈ ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಮಾಡುತ್ತಿದ್ದ ಕೆಲಸ ನಿಜಕ್ಕೂ ಆಶ್ವರ್ಯವನ್ನುಂಟು ಮಾಡುತ್ತದೆ.. ಹೌದು ಎಲ್ಲರಿಗೂ ತಿಳಿದಿರುವಂತೆ ನಟಿ ಐಂದ್ರಿತಾ ರೈ ಬೆಂಗಾಳಿ‌ ಮೂಲದವರು.. ಆದರೆ ತಮ್ಮ ವೃತ್ತಿ ಜೀವನ ಕಟ್ಟಿಕೊಂಡಿದ್ದು ಮಾತ್ರ ನಮ್ಮ ಬೆಂಗಳೂರಿನಲ್ಲಿಯೇ.. ಹೌದು ಐಂದ್ರಿತಾ ರೈ ನಟಿಯಾಗಬೇಕು‌ ಎಂದುಕೊಂಡು ಬೆಂಗಳೂರಿಗೆ ಬಂದವರಲ್ಲ.. ಅವರು ಬೆಂಗಳೂರಿಗೆ ಕಾಲಿಟ್ಟಿದ್ದೇ ಬೇರೆ ಕಾರಣಕ್ಕೆ.. ಆದರೆ ಇಲ್ಲಿ ಆಗಿದ್ದೇ ಬೇರೆ.. ಹೌದು ಐಂದ್ರಿತಾ ರೈ ಅವರು ಉತ್ತರದಿಂದ ನಮ್ಮ ಈ ದಕ್ಷಿಣದ ಬೆಂಗಳೂರಿಗೆ ಬಂದಿದ್ದು ವಿಧ್ಯಾಭ್ಯಾಸಕ್ಕಾಗಿ..

ಹೌದು ವಿಧ್ಯಾಭ್ಯಾಸ ಮುಗಿಸಿದ ಬಳಿಕ ಕೆಲಸಕ್ಕೂ ಹೋಗುತ್ತುದ್ದ ಐಂದ್ರಿತಾ ರೈ ನಂತರ ಮಾಡೆಲಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡು ಆಗಾಗ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡು ಹೆಸರು ಮಾಡುತ್ತಾರೆ.. ಆನಂತರ ಅಲ್ಲಿಂದ ಸಿನಿಮಾ ಅವಕಾಶಗಳು ಶುರುವಾದವು.. ಹೌದು ಮೊದಮೊದಲು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಐಂದ್ರಿತಾ ಅವರು ಜಾಕ್ ಪಾಟ್ ಸಿನಿಮಾದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಂಡರು.. ನಂತರ ಐಂದ್ರಿತಾ ರೈ ಅವರನ್ನು‌ ನೋಡಿ ಸಾಕಷ್ಟು ಸಿನಿಮಾಗಳ ಅವಕಾಶಗಳು ಬಂದವು.. 2008 ರಲ್ಲಿ‌ ಮೆರವಣಿಗೆ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿಯಾದರು.. ನಂತರ ಕೆಲವೊಂದಿಷ್ಟು ವರ್ಷಗಳ ಕಾಲ ಹಿಂತಿರುಗಿ ನೋಡಿದ್ದೇ ಇಲ್ಲ..

ಹೌದು ಮನಸಾರೆ ಸೇರಿದಣ್ತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಹೆಸರು ಮಾಡಿದ ಐಂದ್ರಿತಾ ರೈ ಹತ್ತು ವರ್ಷಗಳ ಕಾಲ ದಿಗಂತ್ ರನ್ನು ಪ್ರೀತಿಸಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯ ನಂತರವೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತುರುವ ಐಂದ್ರಿತಾ ರೈ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ ಹಾಗೂ ಇನ್ನೂ ಮೂರ್ನಾಲ್ಕು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.. ಆದರೆ ಈ ಸಿನಿಮಾ ಇಂಡಸ್ಟ್ರಿಗೂ ಮುನ್ನ ಐಂದ್ರಿತಾ ವೈದ್ಯೆ ಯಾಗಿ ಕೆಲಸ ಮಾಡುತ್ತಿದ್ದರು..

ಹೌದು ಬೆಂಗಳೂರಿನಲ್ಲಿಯೇ ಡೆಂಟಲ್ ಸೈನ್ಸ್ ನಲ್ಲಿ ಪದವಿ ಪಡೆದು ಡೆಂಟಿಸ್ಟ್ ಆದರು.. ಆ ಬಳಿಕ ಮಾಡೆಲಿಂಗ್ ಸಿನಿಮಾ ಅಂತ ಬ್ಯುಸಿ ಆಗಿ ತಮ್ಮ ಆ ವೃತ್ತಿಯನ್ನು ಬಿಟ್ಟರು.. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ವಿವಾದಗಳಿಗೂ ಐಂದ್ರಿತಾ ಹೆಸರುವಾಸಿ.. ಬಹಳಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಐಂದ್ರಿತಾ ರೈ ಒಮ್ಮೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಗ್ಗೆ ವಿವಾದ ಸೃಷ್ಟಿ‌ ಮಾಡಿದ್ದರು.. ಆನಂತರದಲ್ಲಿ ಐಂದ್ರಿತಾ ಚಿತ್ರೀಕರಣಕ್ಕೆ ಬರುವುದು ಸಹ ತಡ.. ಹೇಳಿದ ಸನಯಕ್ಕೆ ಬರೋದಿಲ್ಲ.. ಬೇಗ ಹೊರಡುತ್ತಾರೆ ಹೀಗೆಲ್ಲಾ ಸುದ್ದಿ ಹರಿದಾಡಿತ್ತು.. ಆನಂತರ ಚಿತ್ರರಂಗದಲ್ಲಿ ಕೊಂಚ ಅವಕಾಶಗಳು‌ ಕಡಿಮೆಯಾಗಿದ್ದು ಸುಳ್ಳಲ್ಲ.. ಇನ್ನು ಸಧ್ಯ ದಿಗಂತ್ ಹಾಗೂ ಕುಟುಂಬದ ಜೊತೆ ಪ್ರವಾಸಗಳಲ್ಲಿ ಬ್ಯುಸಿ ಆಗುವ ಐಂದ್ರಿತಾ ರೈ ಇದೀಗ ಮತ್ತೆ ತಮ್ಮ ಫಾರ್ಮ್ ಗೆ ಬರುತ್ತಿದ್ದು ನಾಲ್ಕು ಸಿನಿಮಾ ಕೈಯಲ್ಲಿವೆ.. ಒಟ್ಟಿನಲ್ಲಿ ಡೆಂಟಿಸ್ಟ್ ಆಗಿದ್ದ ಐಂದ್ರಿತಾ ರೈ ಸಧ್ಯ ನಟಿಯಾಗಿ ಮಿಂಚುತ್ತಿದ್ದಾರೆನ್ನಬಹುದು..