ಅಗ್ನಿಸಾಕ್ಷಿ ಸನ್ನಿಧಿಗೆ ಇದೇನಾಯ್ತು?

ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಇಷ್ಟಪಡುವ ಹೆಸರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರವನ್ನು ಇಂದಿಗೂ ಜನರು ಮರೆತಿಲ್ಲ. ಈಗಲೂ ವೈಷ್ಣವಿ ಅವರನ್ನು ಸನ್ನಿಧಿ ಎಂದೇ ಕರೆಯುವ ಸಾಕಷ್ಟು ಜನರಿದ್ದಾರೆ. ವೈಷ್ಣವಿ ಅವರನ್ನು ಮತ್ತೊಮ್ಮೆ ಕಿರುತೆರೆಯಲ್ಲಿ ನೋಡುವ ಆಸೆ ಜನರದ್ದು. ಆದರೆ ವೈಷ್ಣವಿ ಅವರು ಅಗ್ನಿಸಾಕ್ಷಿ ನಂತರ ಮತ್ಯಾವುದೇ ಧಾರಾವಾಹಿಯನ್ನು ಇಡುವರೆಗು ಒಪ್ಪಿಕೊಂಡಿಲ್ಲ. ಆದರೆ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದರೆ ವೈಷ್ಣವಿ. ಇದೀಗ ವೈಷ್ಣವಿ ಅವರು ಚಾಪೆ ದಿಂಬು ಹಿಡಿದು, ಹಳ್ಳಿ ಹಕ್ಕಿಯಾಗಿ ಪಯಣ ಶುರು ಮಾಡಿದ್ದಾರೆ. ವೈಷ್ಣವಿ ಹೊರಟಿರುವುದು ಎಲ್ಲಿಗೆ? ಏನಿದು ಹಳ್ಳಿ ಹಕ್ಕಿಯ ಹೊಸ ಸುದ್ದಿ?

ವೈಷ್ಣವಿ ಅವರು ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ದೇವಿ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದರು. ಆದರೆ ವೈಷ್ಣವಿ ಅವರಿಗೆ ಹೆಚ್ಚಿನ ಬೇಡಿಕೆ ಸಿಕ್ಕಿದ್ದು ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ. ಆ ಪಾತ್ರದ ಅಭಿನಯ ಮತ್ತು ತೀವ್ರತೆ ಎಷ್ಟಿತ್ತು ಅಂದ್ರೆ, ವೈಷ್ಣವಿ ಅವರನ್ನು ನೋಡುವ ಸಲುವಾಗಿಯೇ ಸಾಕಷ್ಟು ಜನರು ಧಾರಾವಾಹಿ ನೋಡುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಅಗ್ನಿಸಾಕ್ಷಿ ಧಾರಾವಾಹಿ ವೈಷ್ಣವಿ ಅವರನ್ನು ಕರ್ನಾಟಕದ ಮನೆಮಗಳಾಗಿ ಮಾಡಿತ್ತು.

ಅಗ್ನಿಸಾಕ್ಷಿ ಬಳಿಕ ವೈಷ್ಣವಿ ಅವರು ಬೇರೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕೆಲವೊಂದು ಶೋಗಳನ್ನು ನಿರೂಪಣೆ ಮಾಡಿದರು. ನಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, ಫಿನಾಲೆವರೆಗೂ ತಲುಪಿದ್ದರು. ಬಿಗ್ ಮನೆಯಲ್ಲಿ ವೈಷ್ಣವಿ ಅವರ ನಿಜವಾದ ಸ್ವಭಾವ ನೋಡಿ ಜನರು ಸಹ ಫುಲ್ ಫಿದಾ ಆಗಿದ್ದರು. ಬಿಗ್ ಬಾಸ್ ನಂತರ ವೈಷ್ಣವಿ ಗೌಡ ಅವರು ಯೂಟ್ಯೂಬ್ ಚಾನೆಲ್, ಫೋಟೋಶೂಟ್ ಇವುಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ.

ಅದೆಲ್ಲದರ ನಡುವೆ ಈಗ ವೈಷ್ಣವಿ ಅವರು ಚಾಪೆ ದಿಂಬು ಹಿಡಿದು, ಸೀರೆ ಧರಿಸಿ ಎಲ್ಲಿಗೂ ಹೊರಟಿದ್ದಾರೆ. ವೈಷ್ಣವಿ ಅವರಿಗೆ ಏನಾಯ್ತು ಎಂದು ನೀವು ಯೋಚನೆ ಮಾಡುತ್ತಿರಬಹುದು. ಇದು ವೈಷ್ಣವಿ ಅವರು ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಆಗಿದೆ. ಈ ಸಿನಿಮಾ ಹೆಸರು, ‘ಬೆಳ್ಳಿ ಚುಕ್ಕಿ, ಹಳ್ಳಿ ಹಕ್ಕಿ’. ಈ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ ವೈಷ್ಣವಿ ಗೌಡ. ಈ ಸಿನಿಮಾದ ನಾಯಕ ಮತ್ತು ನಿರ್ದೇಶಕ ಮಹೇಶ್ ಗೌಡ. ಲಂಡನ್ ನಲ್ಲಿ ಸಿನಿಮಾ ಬಗ್ಗೆ ಕಲಿತು ಬಂದಿರುವ ಮಹೇಶ್ ಗೌಡ ಅವರು, ಮೊದಲಿಗೆ ರಾಜ್ ಬಿ ಶೆಟ್ಟಿ ನಟನೆಯ ಮಹಿರ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು.

ಇದೀಗ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅವರೇ ನಾಯಕನಾಗಿದ್ದಾರೆ. ಹಾಗೂ ಈ ಸಿನಿಮಾ ಶುರುವಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಕಾರಣ. ನಿರ್ದೇಶಕರು ಹೇಳುವ ಹಾಗೆ, ಕಳೆದ ವರ್ಷ ಅವರಿಗೆ ಅಪ್ಪು ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದಾಗ, ಅಪ್ಪು ಅವರೊಡನೆ ಸಿನಿಮಾ ಕಥೆ ಹೇಳಿದ್ದರಂತೆ. ಅದನ್ನು ಕೇಳಿ ಅಪ್ಪು ಅವರು, ಕಥೆ ಚೆನ್ನಾಗಿದೆ, ನೀವೇ ಹೀರೋ ಆದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರಂತೆ. ಅದೇ ರೀತಿ ಮಹೇಶ್ ಗೌಡ ಅವರೇ ಹೀರೋ ಆಗಿದ್ದಾರೆ.

ಈ ಸಿನಿಮಾದಲ್ಲಿ ನಾಯಕನಿಗೆ ತೊನ್ನು ಸಮಸ್ಯೆ ಇರುತ್ತದೆ. ಆ ರೀತಿಯ ಸಮಸ್ಯೆ ಇರುವ ಹುಡುಗ ಪಕ್ಕದ ಹಳ್ಳಿಯ ಮುದ್ದಾದ ಹುಡುಗಿಯನ್ನು ಇಷ್ಟಪಡುತ್ತಾನೆ. ಇಂತಹ ಸಮಸ್ಯೆ ಇದ್ದರು ಸಹ ಆಕೆ ಹುಡುಗನನ್ನು ಇಷ್ಟಪಟ್ಟು ಮದುವೆಯಾಗುತ್ತಾಳೆ, ಇದಕ್ಕೆ ಕಾರಣ ಏನು ಎನ್ನುವ ಗೊಂದಲ ಹುಡುಗನಿಗೆ. ಕಾರಣ ಏನಿರಬಹುದು ಎನ್ನುವುದು ಹೀರೋ ತಿಳಿದುಕೊಳ್ಳುವ ಪ್ರಯತ್ನವೇ ಸಿನಿಮಾ ಕಥೆ. ಈ ಸಿನಿಮಾದಲ್ಲಿ ವೈಷ್ಣವಿ ಅವರದ್ದು ಮುದ್ದಾದ ಹಳ್ಳಿ ಹುಡುಗಿಯ ಪಾತ್ರ. ಕಥೆ ಕೇಳುತ್ತಿದ್ದ ಹಾಗೆಯೇ ಬಹಳ ಸಂತೋಷದಿಂದ ಒಪ್ಪಿಕೊಂಡರಂತೆ ವೈಷ್ಣವಿ ಗೌಡ.

ಪುನೀತ್ ರಾಜ್ ಕುಮಾರ್ ಅವರ ಹಾರೈಕೆಯ ಮತ್ತು ಆಶೀರ್ವಾದದ ಜೊತೆಗೆ ಸಿನಿಮಾ ಶುರುವಾಗಿದೆ. ಮಲೆನಾಡಿನ ಸುತ್ತಮುತ್ತಾ ಸಿನಿಮಾ ಚಿತ್ರೀಕರಣ ನಡೆಯಲಿದೆಯಂತೆ. ಇದೊಂದು ಸಮಸ್ಯೆ ಬಗ್ಗೆ ಆಧರಿಸಿ ಮಾಡಿರುವ ಕಥೆ ಆಗಿದ್ದು, ಈ ರೀತಿಯ ಕಥೆಯನ್ನು ರೊಮ್ಯಾಂಟಿಕ್ ಕಾಮಿಡಿ ಜಾನರ್ ನಲ್ಲಿ ತೋರಿಸಲಾಗುತ್ತಿದೆ. ನಾಯಕ ಮತ್ತು ನಿರ್ದೇಶಕ ಆಗಿರುವ ಮಹೇಶ್ ಅವರಿಗೆ ನಿಜ ಜೀವನದಲ್ಲೂ ಅದೇ ಸಮಸ್ಯೆ ಇರುವ ಕಾರಣ ನ್ಯಾಚುಲರ್ ಆಗಿ ಮೂಡಿಬರಲಿದೆಯಂತೆ.