ನಟಿ ಅದಿತಿ ಪ್ರಭುದೇವ್ ಈಗಾಗಲೇ ಎಂಗೇಜ್ ಆಗಿದ್ದೇನೆ ಎಂದಿದ್ದರು. ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾವಿ ಪತಿ ಯಶಸ್ ಅವರನ್ನು ಕರೆದುಕೊಂಡು ಬಂದಿದ್ದ ಅದಿತಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲಿತ್ತು. ಈಗ ಅದಿತಿ ಅಂತೂ ಮದುವೆ ದಿನಾಂಕವನ್ನು ಬಹಿರಂಗ ಮಾಡಿದ್ದಾರೆ. ನವೆಂಬರ್ 27ರಂದು ಅದಿತಿ, ಯಶಸ್ ಪಟ್ಲಾ ಕಲ್ಯಾಣ ನೆರವೇರಲಿದೆ. ಮದುವೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಸ್ಯಾಂಡಲ್ವುಡ್ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ. ಯಶಸ್ ಮೂಲತಃ ಚಿಕ್ಕಮಗಳೂರಿನವರು, ಕಾಫಿ ತೋಟದ ಮಾಲೀಕರೂ ಹೌದು. ರೈತರ ಕುಟುಂಬದಲ್ಲಿ ಬೆಳೆದಿರುವ ಯಶಸ್ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯಲಿದ್ದಾರೆ. ಕೆಲ ವೇದಿಕೆಯಲ್ಲಿ ನಾನು ರೈತನನ್ನು ಮದುವೆಯಾಗುವೆ ಎಂದು ಅದಿತಿ ಅವರು ಸುಳಿವು ನೀಡಿದ್ದರು.ಕಳೆದ ವರ್ಷ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಸ್ವತಃ ನಟಿ ಅದಿತಿ ಪ್ರಭುದೇವ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡು, ‘ಕನಸೊಂದು ಕನಸಿನಂತೆ ನನಸಾಯಿತು’ ಎಂದಿದ್ದಾರೆ.
ಈ ಹಿಂದೆ ರಿಯಾಲಿಟಿ ಶೋನಲ್ಲಿ ಮಾತನಾಡಿದ್ದ ಅದಿತಿ ಪ್ರಭುದೇವ ಅವರು ಚಿತ್ರರಂಗಕ್ಕೆ ಬರುವ ಸಮಯದಲ್ಲಿ ಒಮ್ಮೆ ನಾನು ಮಲಗಿ ಎದ್ದಾಗ ಅಮ್ಮ ದೇವರು ಮನೆಗೆ ಕರೆದುಕೊಂಡು ಹೋಗಿ ನೀನು ಬದಲಾಗಬಾರದು, ನನ್ನ ಮಗಳು ಈಗ ಹೇಗಿದ್ದಾಳೋ ಆಗಲೂ ಹಾಗೆ ಇರುತ್ತಾಳೆ ಎಂದು ಆಣೆ ಮಾಡಿಕೊಂಡರು. ಅವರ ಮಾತಿನ ಅರ್ಥ ಏನು ಎಂದು ನನಗೆ ಗೊತ್ತು. ಬೇಡದಿರೋ ವಿಷಯಗಳು ಯಾಕೆ ಬೇಕು ಅಂತ ನನ್ನ ಬದುಕನ್ನು ಚೌಕಟ್ಟಿನೊಳಗೆ ಇಟ್ಟುಕೊಂಡು ಬರುತ್ತ ಬಂದೆ, ಎಷ್ಟೋ ಸಲ ನನ್ನ ಬದುಕು ನನಗೆ ಉಸಿರುಗಟ್ಟಿಸಿದೆ. ನಾನು ನನ್ನ ಕರ್ಮಕ್ಕೆ ಲವ್ ಮಾಡಿಲ್ಲ, ಒಂದು ಹುಡುಗನ ಮೇಲೆ ಮೊದಲ ಬಾರಿಗೆ ಫೀಲಿಂಗ್ ಬಂತು. ಯಶಸ್ ..ನೀನು ನನ್ನ ಜೀವನದಲ್ಲಿ ಬಂದಿದ್ದಕ್ಕೆ ಥ್ಯಾಂಕ್ಯು, ನಾನು ತೆಗೆದುಕೊಂಡ ನಿರ್ಧಾರಗಳಲ್ಲಿ ನೀವು ಒಳ್ಳೆಯ ನಿರ್ಧಾರ ಎಂದು ಭಾವಿಸುವೆ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ. ಅಂದಹಾಗೆ ಅದಿತಿ ಜೀವನದಲ್ಲಿ ಕ್ರಮವಾಗಿ ಮೊದಲು ಅಪ್ಪ-ಅಮ್ಮ, ಗಂಡ, ವೃತ್ತಿ ಜೀವನ, ಅತ್ತೆ ಮಾವ, ಆದ್ಯತೆ ನೀಡುತ್ತಾರಂತೆ.
ಅದಿತಿ ನಟನೆಯ ಚಾಂಪಿಯನ್, ತ್ರಿಬಲ್ ರೈಡಿಂಗ್, ಅಂದೊಂದಿತ್ತು ಕಾಲ, ಮಾಫಿಯಾ, ಒನ್ಸ್ ಅಪೋನ್ ಅ ಟೈಮ್ ಇನ್ ಜಮಾಲಿಗುಡ್ಡ . ಸಿನಿಮಾಗಳು ರಿಲೀಸ್ ಆಗಬೇಕಿವೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321