ಚಿಕ್ಕಣ್ಣ ಆರೋಗ್ಯದಲ್ಲಿ ಏರುಪೇರು.. ನಿಜಕ್ಕೂ ಏನಾಗಿದೆ ನೋಡಿ..

ಚಂದನವನದ ಖ್ಯಾತ ಹಾಸ್ಯನಟರಲ್ಲಿ ಒಬ್ಬರಾದ ಚಿಕ್ಕಣ್ಣ ಅವರಿಗೆ ಇಂದು ಎಷ್ಟು ಜನಪ್ರಿಯತೆ ಎಂದು ನಮಗೆಲ್ಲ ಗೊತ್ತಿದೆ. ಒಂದು ಸಿನಿಮಾಗೆ ನಾಯಕ ಮತ್ತು ನಾಯಕಿಯಷ್ಟೇ ಹಾಸ್ಯನಟರು ಕೂಡ ಮುಖ್ಯವಾಗುತ್ತಾರೆ. ಏಕೆಂದರೆ ಸಿನಿಪ್ರಿಯರನ್ನು ನಗಿಸುವುದು ಸುಲಭದ ಕೆಲಸವಂತು ಅಲ್ಲ. ಅಂತಹ ಹಾಸ್ಯನಟರಲ್ಲಿ ಚಿಕ್ಕಣ್ಣ ಸಹ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಈಗ ಇವರಿಗೆ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚು. ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಸಹ ಚಿಕ್ಕಣ್ಣ ಅವರಿಗೆ ಒಂದು ಪಾತ್ರ ಇದ್ದೇ ಇರುತ್ತದೆ, ಅವರನ್ನು ಅಭಿಮಾನಿಗಳು ಅಷ್ಟರ ಮಟ್ಟಿಗೆ ಇಷ್ಟ ಪಡುತ್ತಾರೆ.

ಚಿಕ್ಕಣ್ಣ ಇಷ್ಟು ದಿನಗಳ ಕಾಲ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದವರು, ಇದೀಗ ಹೀರೋ ಆಗಿ ಮಿಂಚಲು ಸಿದ್ಧವಾಗಿದ್ದಾರೆ. ಉಪಾಧ್ಯಕ್ಷ ಎನ್ನುವ ಸಿನಿಮಾದಲ್ಲಿ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಹಿಟ್ಲರ್ ಕಲ್ಯಾಣ ಧಾರವಾಹಿ ನಾಯಕಿ ಮಲೈಕಾ ವಸುಪಾಲ್ ಅವರು ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉಪಾಧ್ಯಕ್ಷ ಸಿನಿಮಾವನ್ನು ಚಂದನವನದ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ನಿರ್ಮಾಣ ಮಾಡುತ್ತಿದ್ದಾರೆ..

ಈ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ನಿರ್ಮಾಣ ಮಾಡಲಾಗಿರುವ ಭರ್ಜರಿಯಾದ ಸೆಟ್ ನಲ್ಲಿ ಉಪಾಧ್ಯಕ್ಷ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, 32 ದಿನಗಳ ಕಾಲ ಅಲ್ಲಿಯೇ ಇರಲಿದೆ ಚಿತ್ರತಂಡ, ಬಳಿಕ ಬೆಂಗಳೂರು ಮತ್ತು ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈ ಎಲ್ಲಾ ಸಂತೋಷದ ವಿಚಾರಗಳ ನಡುವೆ ಚಿಕ್ಕಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಚಿಕ್ಕಣ್ಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದ ಹಾಗೆ, ಹಲವರು ಗಾಬರಿಯಾಗಿ, ಸ್ವತಃ ಚಿಕ್ಕಣ್ಣ ಅವರಿಗೆ ಕರೆಮಾಡಿ, ವಿಚಾರಿಸಿಕೊಂಡಿದ್ದಾರೆ. ಹಾಗಾಗಿ ಚಿಕ್ಕಣ್ಣ ಅವರು ಚಿತ್ರತಂಡದ ಜೊತೆಗೆ ಒಂದು ವಿಡಿಯೋ ಮಾಡಿ, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿಕ್ಕಣ್ಣ ಅವರಿಗೆ ಏನು ಆಗಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ. ಆದರೆ ಯಾರೋ ಕಿಡಿಗೇಡಿಗಳು ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದು, ಚಿಕ್ಕಣ್ಣ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಚಿತ್ರತಂಡ ಹಾಗೂ ಚಿಕ್ಕಣ್ಣ ಅವರು ಕಾಣಿಸಿಕೊಂಡಿದ್ದು, ನನಗೆ ಏನು ಆಗಿಲ್ಲ, ನಾನು ಆರೋಗ್ಯವಾಗಿದ್ದೀನಿ. ಉಪಾಧ್ಯಕ್ಷ ಶೂಟಿಂಗ್ ನಲ್ಲಿದ್ದೀನಿ.. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಥ್ಯಾಂಕ್ಸ್ ಕಣ್ರಪ್ಪ ಎಂದು ಹಾಸ್ಯವಾಗಿ ಹೇಳಿದ್ದಾರೆ ಚಿಕಣ್ಣ. ಈ ಮೂಲಕ ಇದು ಕಿಡಿಗೇಡಿಗಳ ಕೆಲಸವಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಚಿಕ್ಕಣ್ಣ ಅವರ ವಿಷಯದಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಮದುವೆ ವಿಚಾರದಲ್ಲೂ ಹೀಗೆ ಆಗಿತ್ತು.

ಚಿಕ್ಕಣ್ಣ ಅವರು ಒಬ್ಬ ನಿರೂಪಕಿ ಜೊತೆಗೆ ಮದುವೆ ಆಗಿದ್ದಾರೆ, ನಟಿಯ ಜೊತೆಗೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅವರ ಆರೋಗ್ಯದ ಬಗೆಗಿನ ಸುದ್ದಿಯೊಂದು ವೈರಲ್ ಆಗಿದೆ. ಚಿಕ್ಕಣ್ಣ ಅವರಿಗೆ ಏನೋ ಆಗಿದೆ ಎಂದುಕೊಂಡು ಅಭಿಮಾನಿಗಳು ಸಹ ಗಾಬರಿಯಾಗಿದ್ದು ಖಂಡಿತ, ಆದರೆ ಅದೆಲ್ಲದಕ್ಕೂ ಚಿಕ್ಕಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ..