ಒಂದು ಚಿಟಿಕೆ ಇದನ್ನು ತಿಂದರೆ ಮಲಬದ್ಧತೆ, ಅಜೀರ್ಣ ಸಂಪೂರ್ಣ ಮಾಯವಾಗುವುದು..

ಕೆಲವರಿಗೆ ಅಜೀರ್ಣ ಅಂದರೆ ಸರಿಯಾಗಿ ಜೀರ್ಣಕ್ರಿಯೆ ಆಗದೇ ಇರುವ ಸಮಸ್ಯೆ ಇರುತ್ತದೆ. ಜೀರ್ಣ ಸರಿಯಾಗಿ ಆಗದಿದ್ದಲ್ಲಿ, ಗ್ಯಾಸ್, ಮಲಬದ್ಧತೆ ಮೊದಲಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗೆಯೇ ಎಸಿಡಿಟಿ ಅನ್ನುವುದು ಕೂಡ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುವ ಆರೋಗ್ಯ ಸಮಸ್ಯೆ. ಇವೆಲ್ಲವೂ ಅಷ್ಟು ದೊಡ್ಡ ಸಮಸ್ಯೆ ಅಲ್ಲ, ಹಾಗೆಯೇ ಸರಿ ಹೋಗುತ್ತೆ ಎಂದು ನಿರ್ಲಕ್ಷ ಮಾಡುವವರೇ ಹೆಚ್ಚು. ಆದರೆ ನೆನಪಿಡಿ ಇವತ್ತಿನ ಈ ಚಿಕ್ಕ ಆರೋಗ್ಯ ಸಮಸ್ಯೆ ಮುಂದೆ ಗುಣಪಡಿಸಲಾಗದ ಖಾಯಿಲೆಯಾಗಿ ಮಾರ್ಪಡಬಹುದು..

ಹಾಗಾಗಿಯೇ ಹೊಟ್ಟೆಗೆ ಸಂಬಂಧಿಸಿದ ಇಂತಹ ಹಲವು ತೊಂದರೆಗಳನ್ನು ನಿವಾರಿಸಬಲ್ಲ ಒಂದು ಅತ್ಯುತ್ತಮ ಮನೆಮದ್ದನ್ನು ತಿಳಿಸುತ್ತಿದ್ದೇವೆ ಮುಂದೆ ಓದಿ.. ಈ ಮನೆಮದ್ದು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು: ಜೀರಿಗೆ ಒಂದು ಚಮಚ, ಓಮ (ಅಜ್ವಾನ) – ಒಂದು ಚಮಚ, ಸೋಂಪು – ಒಂದು ಚಮಚ.

ಮಾಡುವ ವಿಧಾನ: ಜೀರಿಗೆ, ಓಮ ಹಾಗೂ ಸೋಂಪು ಕಾಳುಗಳು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಂತ ಔಷಧಿಯ ಗುಣಗಳನ್ನು ಹೊಂದಿರುತ್ತವೆ. ಹಾಗಾಗಿ ಇವು ಹೊಟ್ಟೆಗೆ ಸಂಬಂಧಿಸಿದ, ಜೀರ್ಣಕ್ರಿಯೆ ಮೊದಲಾದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತವೆ. ಒಂದು ಚಮಚ ಜೀರಿಗೆ, ಓಮ ಹಾಗೂ ಸೋಂಪು ಕಾಳುಗಳನ್ನು ಒಂದು ತವಾದ ಮೇಲೆ ಚೆನ್ನಾಗಿ ಹುರಿದುಕೊಳ್ಳಿ. ಇದು ತುಂಬಾ ಕೆಂಪಗಾಗುವವರೆಗೆ ಹುರಿಯುವ ಅಗತ್ಯವಿಲ್ಲ.

ಕಾಳುಗಳು ಪರಿಮಳ ಬಿಡುವವರೆಗೆ ಹುರಿದುಕೊಳ್ಳಬೇಕು. ನಂತರ ಇವುಗಳನ್ನು ರುಬ್ಬಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಬ್ಲಾಕ್ ಸಾಲ್ಟ್ ಬೇಕಿದ್ದರೆ ಸೇರಿಸಿ ಜಾಸ್ತಿ ಪ್ರಮಾಣದಲ್ಲಿ ಪುಡಿ ಮಾಡಿ ಶೇಖರಿಸಿಟ್ಟುಕೊಂಡು ಬೇಕಾದಾಗ ಬಳಸಬಹುದು. ಈ ಪುಡಿಯನ್ನು ನಿಮಗೆ ಹೊಟ್ಟೆಯಲ್ಲಿ ಗ್ಯಾಸ್, ಅಥವಾ ಅಜೀರ್ಣ ಮೊದಲಾದವುಗಳು ಉಂಟಾಗಿದ್ದರೆ ಈ ಪುಡಿಯನ್ನು ಅರ್ಧ ಚಮಚದಷ್ಟು ತಿಂದು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.

ಇದನ್ನು ಮಕ್ಕಳಿಗೂ ಕೊಡಬಹುದು ಆದರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತಿನ್ನಿಸಿ. ಈ ಪುಡಿಯನ್ನು ಯಾವುದೇ ಸಮಯದಲ್ಲಿಯೂ ತಿನ್ನಬಹುದು. ಊಟವಾದ ಕೂಡಲೇ ತಿಂದರೆ ಹೊಟ್ಟೆ ಉಬ್ಬಿಸಿದಂತಾಗುವುದು ಕೂಡ ಉಪಶಮನವಾಗುತ್ತದೆ. ಅತ್ಯಂತ ಉಪಯುಕ್ತವಾದ ಜೀರಿಗೆ ಹಾಗೂ ಇತರ ಕಾಳುಗಳು ನಮ್ಮ ದೇಹದಲ್ಲಿ ಹಿಮೋಗ್ಲೊಬಿನ್ ಪ್ರಮಾಣವನ್ನೂ ಕೂಡ ಕ್ರಮೇಣ ಹೆಚ್ಚಿಸುತ್ತವೆ. ಹಾಗಾಗಿ ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಮಾಡಬಹುದಾದ ಈ ಮನೆಮದ್ದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ..