ತಮ್ಮ ಗಂಡನ ಸ್ಥಾನದ ಬಗ್ಗೆ ಅಸಮಾಧಾನ ಹೊರ ಹಾಕಿದ ನಟ ಅಭಿಜಿತ್ ಪತ್ನಿ..

ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮ ಜೀವನದ ಕಷ್ಟಗಳನ್ನು ಅವರುಗಳು ನಡೆದು ಬಂದ ಹಾದಿಯನ್ನು ಹೇಳಿಕೊಳ್ಳುವುದು ಹೊಸ ವಿಚಾರವೇನೂ ಅಲ್ಲ.. ಅಂತಹ ಸಂಚಿಕೆಗಳು ಪ್ರೇಕ್ಷಕರನ್ನು ಭಾವುಕರನ್ನಾಗಿಸೋದು ಉಂಟು.. ಅದರಲ್ಲೂ ಸ್ಟಾರ್ ನಟರುಗಳ ಜೀವನದ ಕಷ್ಟದ ಕತೆಗಳು ನಿಜಕ್ಕೂ ಕಣ್ಣೀರು ತರಿಸಿ ಬಿಡುತ್ತವೆ.. ಅದೇ ರೀತಿ ಜೋಡಿ ನಂಬರ್ ಒನ್ ಶೋನಲ್ಲಿ ಇದೀಗ ಹಿರಿಯ ನಟ ಅಭಿಜಿತ್ ಅವರ ಪತ್ನಿ ತಮ್ಮ ಗಂಡನ ಸ್ಥಾನದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.. ಹೌದು 1980ರಲ್ಲಿ ನಟನೆ ಆರಂಭಿಸಿದ್ದ ನಟ ಅಭಿಜಿತ್ ಅವರು 1990, 2000ರಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸ್ಫುರದ್ರೂಪಿ ನಟನಿಗೆ ಒಳ್ಳೆಯ ಅವಕಾಶಗಳು ಸಿಗಲಿಲ್ಲ, ಆ ಸ್ಥಾನವೂ ಸಿಗಲಿಲ್ಲ ಎಂದು ಅವರ ಪತ್ನಿ ರೋಹಿಣಿ ಅವರು ಜೋಡಿ ನಂ 1 ಶೋನಲ್ಲಿ ಹೇಳಿದ್ದಾರೆ.

ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಅಭಿಜಿತ್ ಅವರು ಪತ್ನಿ ರೋಹಿಣಿ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟಗಳು, ಅವಕಾಶವಿಲ್ಲದ ದಿನಗಳು, ಮನೆಯಲ್ಲಿ ಬಡತನದ ಬಗ್ಗೆ ಈಗಾಗಲೇ ಈ ದಂಪತಿ ಜೋಡಿ ನಂ1 ಶೋನಲ್ಲಿ ಹೇಳಿಕೊಂಡಿದ್ದರು.

ಜೋಡಿ ನಂ 1 ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳ ಮಹಾಸಂಗಮದಲ್ಲಿ ಅಭಿಜಿತ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಅವರ ಡ್ಯಾನ್ಸ್, ಆ ಎನರ್ಜಿ ನೋಡಿ ಡಾ.ಶಿವರಾಜ್‌ಕುಮಾರ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಅಚ್ಚರಿ ಜೊತೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಜಿತ್ ಡ್ಯಾನ್ಸ್ ನೋಡಿ ಮಾತನಾಡಿದ ರಕ್ಷಿತಾ ಪ್ರೇಮ್ ಅವರು ಸರ್, ನೀವು ನಮಗೆ ಸ್ಫೂರ್ತಿ ಎಂದಿದ್ದಾರೆ. ಶಿವರಾಜ್‌ಕುಮಾರ್ ಅವರು, ಅಭಿಜಿತ್ ನಿಜವಾದ ಫೈಟರ್, ಜೀವನವಿಡೀ ಫೈಟ್ ಮಾಡ್ತಾರೆ ಎಂದಿದ್ದಾರೆ. ಅರ್ಜುನ್ ಜನ್ಯ ಅವರು ಕಲಾವಿದನಿಗೆ ಸಾವಿಲ್ಲ ಎಂದಿದ್ದಾರೆ. ಅದೇ ವೇಳೆ ಮಾತನಾಡಿದ ಅಭಿಜಿತ್ ಪತ್ನಿ ರೋಹಿಣಿ ಅವರು ಅಭಿಜಿತ್ ಒಳ್ಳೆಯ ನಟ, ಆದರೆ ಅವರಿಗೆ ದೇವರು ಒಳ್ಳೆಯ ಸ್ಥಾನವನ್ನು ನೀಡಿಲ್ಲ ಎಂದಿದ್ದಾರೆ.

ಅಭಿಜಿತ್‌ಗೆ ಮಾತು ಕೊಟ್ಟ ಶಿವಣ್ಣ.. ನೀವು ನನ್ನ ಸಹೋದರ ಇದ್ದಂತೆ. ನನ್ನ ಮುಂದಿನ ಸಿನಿಮಾಗಳಲ್ಲಿ ನೀವು ಇರುತ್ತೀರಿ ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ಅಭಿಜಿತ್‌ಗೆ ಮಾತು ನೀಡಿದ್ದಾರೆ. ಆಗ ಅಭಿಜಿತ್, ನೀವು ನನ್ನ ಜೊತೆ ಇರುತ್ತೀರಿ ಎಂದಿದ್ದೇ ದೊಡ್ಡ ಖುಷಿ ಎಂದಿದ್ದಾರೆ. ಡಾ ವಿಷ್ಣುವರ್ಧನ್ ನಟನೆಯ ತುಂಬಿದ ಮನೆ, ಯಜಮಾನ, ಕೋಟಿಗೊಬ್ಬ, ಸಿನಿಮಾದಲ್ಲಿ, ಡಾ.ರಾಜ್‌ಕುಮಾರ್ ಜೊತೆಗೆ ಜೀವನ ಚೈತ್ರ ಸಿನಿಮಾದಲ್ಲಿ ಅಭಿಜಿತ್ ನಟಿಸಿದ್ದರು. ವಿಷ್ಣು ಅವರ ಜೊತೆ ಅಭಿಜಿತ್ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು.

ರೋಹಿಣಿ ಅವರನ್ನು ಪ್ರೀತಿಸಿ ಮದುವೆಯಾಗಿರುವ ಅಭಿಜಿತ್‌ಗೆ ಮೂವರು ಮಕ್ಕಳು, ಮೊಮ್ಮಕ್ಕಳಿದ್ದಾರೆ. ಈ ಜೋಡಿ ಮದುವೆಯಾಗಿ 34 ವರ್ಷಗಳು ಕಳೆದಿವೆ. ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಭಿಜಿತ್ ಅವರು ಅನುರಾಧಾ ಭಟ್, ಸಂಗೀತಾ ರವಿಶಂಕರ್ ಜೊತೆ ಅಕ್ಷರಮಾಲೆ ಎಂಬ ಶೋನ ಸಹನಿರೂಪಕರಾಗಿದ್ದರು. ಉದಯ ವಾಹಿನಿಯಲ್ಲಿ ಈ ಶೋ 15 ವರ್ಷಗಳಿಗೂ ಅಧಿಕ ಸಮಯ ಪ್ರಸಾರ ಆಯ್ತು. ಸದ್ಯ ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿಯಲ್ಲಿ ಅಭಿಜಿತ್ ನಟಿಸುತ್ತಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622