ಆನೆ ಸಾವಿಗೆ ಸ್ಪೋಟಕ ತಿರುವು.. ಆನೆ ಜೀವ ಕಳೆದುಕೊಂಡಿದ್ದು ಹಣ್ಣಿನಿಂದಲ್ಲ.. ಆರೋಪಿ ಅರೆಸ್ಟ್..

ಮೂರು ದಿನದ ಹಿಂದಷ್ಟೇ ಕೇರಳದಲ್ಲಿ ಸಿಡಿಯುವ ವಸ್ತುವಿದ್ದ ಅನಾನಸ್ ಹಣ್ಣು ತಿಂದು ಜೀವ ಕಳೆದುಕೊಂಡಿದ್ದ ಗರ್ಭಿಣಿ ಆನೆಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಇಡೀ ದೇಶವೇ ಒಟ್ಟಾಗಿ ಆಕ್ರೋಶ ವ್ಯಕ್ತ ಪಡಿಸಿತ್ತು.. ಜನ ಸಾಮಾನ್ಯರು, ಸ್ಟಾರ್ ನಟರು, ಆಟಗಾರರು, ರಾಜಕಾರಣಿಗಳು ಪ್ರತಿಯೊಬ್ಬರೂ ಸಹ ಆನೆಯ ಸಾವಿಗೆ ಮರುಗಿದ್ದರು.. ಇದೊಂದು ರೀತಿ ಬೇರೆ ಕೆಲಸದಲ್ಲಿ ತೊಡಗಿದ್ದರೂ ಅದೇ ವಿಚಾರ ತಲೆಯಲ್ಲಿ ಮನಸ್ಸಿನಲ್ಲಿ ಕಾಡುತ್ತಲೇ ಇರುವಂತಾಗಿ ಬಿಟ್ಟಿತ್ತು..

ಇದರಿಂದ ಎಚ್ಚೆತ್ತ ಕೇರಳ ಸರ್ಕಾರ ಆನೆಯ ಸಾವಿಗೆ ಕಾರಣರಾದವರನ್ನು ಖಂಡಿತ ಬಿಡುವುದಿಲ್ಲ ಎಂದಿತ್ತು.. ಇದೀಗ ಮಾತಿನಂತ ಘಟನೆಗೆ ಕಾರಣರಾದ ಮೂವರಲ್ಲಿ ಮೊದಲ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ.. ಆದರೆ ಮೊದಲ ಆರೋಪಿ ಕೊಟ್ಟಿರುವ ಹೇಳಿಕೆಯೇ ಬೇರೆ..

ಹೌದು ಬಂಧಿತ ಆರೋಪಿಯನ್ನು ವಿಲ್ಸನ್ ಎಂದು ಗುರುತಿಸಲಾಗಿದ್ದು ಆತ ರಬ್ಬರ್ ವ್ಯಾಪಾರಿಯಾಗಿದ್ದಾನೆ.. ಜೊತೆಗೆ ಸ್ಪೋಟಕಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.. ಆತ ಕೊಟ್ಟಿರುವ ಹೇಳಿಕೆ ಪ್ರಕಾರ ಆನೆ ಸತ್ತಿದ್ದು ಅನಾನಸ್ ಹಣ್ಣು ತಿಂದಲ್ಲ.. ಬದಲಿಗೆ ಸ್ಪೋಟಕ ತುಂಬಿದ ತೆಂಗಿನ ಕಾಯಿಯನ್ನು ತಿಂದು.. ಹೌದು ಆರೋಪಿ ಹೇಳಿರುವಂತೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಿಡಿ ಮದ್ದನ್ನು ತಯಾರಿ ಕಾಯಿ ಹಾಗೂ ಮಾಂಸದಲ್ಲಿ ಹಾಕಿ ಅದನ್ನು ಸಿಡಿಸಲಾಗುತ್ತದೆ.‌ ಅದೇ ರೀತಿ ಗರ್ಭಿಣಿ ಆನೆಗೂ ಈ ಪಾಪಿಗಳು ಇದನ್ನೇ ಮಾಡಿದ್ದು ತೆಂಗಿನ ಕಾಯಿಯಲ್ಲಿ ಸಿಡಿ ಮದ್ದನ್ನು ಹಾಕಲಾಗಿತ್ತು.. ಅದರ ಒಂದು ಭಾಗವನ್ನು ತಿನ್ನುತಿದ್ದಂತೆ ಆನೆಯ ದವಡೆ ಸ್ಪೋಟ ಗೊಂಡಿದೆ..

ನಂತರ ಆನೆ ನೀರಿನಲ್ಲಿ ಒಂದು ವಾರಗಳ ಕಾಲ ನೋವು ತಡೆಯಲಾಗದೆ ಅಲ್ಲಿಯೇ ನಿಂತು ನರಳಿ ನರಳಿ ಪ್ರಾಣ ಕಳೆದುಕೊಂಡಿದೆ.. ಹೊಟ್ಟೆಯಲ್ಲಿನ ಕಂದನೂ ಪ್ರಪಂಚವ ನೋಡುವ ಮುನ್ನವೇ ಕಣ್ಣು ಮುಚ್ಚಿದೆ..