ಶೈನ್ ವಿಚಾರಕ್ಕೆ ಕೈ ಮುಗಿದು ಕ್ಷಮೆ ಕೇಳಿದ ದೀಪಿಕಾ..‌ ಹೊರ ಬಂದಮೇಲೆ ಇರೋ ಸತ್ಯ ಬಿಚ್ಚಿಟ್ಟ ದೀಪಿಕಾ ದಾಸ್.

ಬಿಗ್ ಬಾಸ್ ಮುಗಿದ ನಂತರ ಮನೆಗೆ ಬಂದ ದೀಪಿಕಾ ದಾಸ್ ಮಾದ್ಯಮದ ಸಂದರ್ಶನವೊಂದರಲ್ಲಿ‌ ಶೈನ್ ವಿಚಾರಕ್ಕೆ ಕೈಮುಗಿದು ಕ್ಷಮೆ ಕೇಳಿದ್ದಾರೆ..

ಹೌದು ಬಿಗ್ ಬಾಸ್ ಈ ಸೀಸನ್ ನಲ್ಲಿ ಶೈನ್ ಹಾಗೂ ದೀಪಿಕಾ ಜೋಡಿ ಜೋರಾಗಿ ಸದ್ದು ಮಾಡಿದ್ದಷ್ಟೇ ಅಲ್ಲದೆ ಸುದ್ದಿ ಆಗಿದ್ದು ತಿಳಿದೇ ಇದೆ.. ಅದರ ಬೆನ್ನಲ್ಲೇ ದೀಪಿಕಾ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಆದ ಬೆಳಬಣಿಗೆಗಳು ಟೀಕೆಗಳು ತಿಳಿದಿದೆ..

ಅದೇ ವಿಚಾರವನ್ನು‌ ಪ್ರಸ್ತಾಪಿಸಿರುವ ದೀಪಿಕಾ ದಾಸ್ ಅಂದು ನಡೆದ ಅಷ್ಟೂ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.. ಹೌದು ಅಂದು ಅಮ್ಮ ಬಿಗ್ ಬಾಸ್ ಮನೆಗೆ ಬಂದಾಗ ಅವರು ಗಾಬರಿಯಾಗಿದ್ದರು..

ಶೈನ್ ವಿಚಾರದಲ್ಲಿ‌ ಸ್ವಲ್ಪ ಬೇಸರವೂ ಇತ್ತು ನಿಜ.. ಅದೇ ಕಾರಣಕ್ಕೆ ಹಾಗೆ ನಡೆದುಕೊಂಡರು.. ಅವರು ಆ ಸಮಯದಲ್ಲಿ ಹಾಗೆ ನಡೆದುಕೊಂಡಿದ್ದು ನನಗೂ ತಪ್ಪು ಅನಿಸಿತು.. ಆದರೆ ಒಬ್ಬ ತಾಯಿಯಾಗಿ ಅವರು ತಪ್ಪು ಮಾಡಿಲ್ಲ..

ಅವರು ಹೋದ ತಕ್ಷಣ ನಾನು ಶೈನ್ ಅವರ ಬಳಿ‌ ಕ್ಷಮೆ ಕೇಳಿದೆ.. ಹಾಗೆಯೇ ನಾವು ಇನ್ನುಮುಂದೆ ಡಿಸ್ಟೆನ್ಸ್ ನಲ್ಲಿ ಇರೋಣ ಅಂತ ಶೈನ್ ಮತ್ತು ನಾನು ಕೂತು ಡಿಸೈಡ್ ಮಾಡಿದ್ವಿ..

ಅಷ್ಟೇ ಅಲ್ಲ ಮನೆಗೆ ತಂದ ಬಾಕ್ಸ್ ನಲ್ಲಿ ಇದ್ದದ್ದನ್ನು ನನಗೆ ತಿನ್ನು ಅಂದದ್ದು ನಿಜ.. ಆದರೆ ಮನೆಯವರಿಗೆಲ್ಲಾ ಅವರು ಊಟ ತಂದಿದ್ದರು.. ಅದನ್ನು ತೋರಿಸಿಲ್ಲ… ಆ ಎಲ್ಲಾ ಕಾರಣಕ್ಕೂ ನಾನೀಗ ಕ್ಷಮೆ ಕೇಳುತ್ತಿದ್ದೇನೆ.. ಆದರೆ ಅವರು ತಪ್ಪು ಮಾಡಿದ್ದಾರೆ ಅಂತ ಅಲ್ಲ.. ತಪ್ಪಾಗಿ ಕಾಣಿಸಿರೋದಕ್ಕೆ ಕ್ಷಮೆ ಕೇಳ್ತೀನಿ ಕ್ಷಮಿಸಿ ಎಂದು ಎಲ್ಲಾ ವಿಚಾರಕ್ಕೂ ಖುದ್ದು ದೀಪಿಕಾ ಅವರೆ ತೆರೆ ಎಳೆದಿದ್ದಾರೆ..
All Rights Reserved News Jagath.