ಪತ್ನಿ ಜೊತೆ ತಮಿಳುನಾಡಿನ ದೇವಸ್ಥಾನಕ್ಕೆ ದರ್ಶನ್ ಭೇಟಿ.. ಫೋಟೋ ಗ್ಯಾಲರಿ ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಡುಗಡೆಗೆ ಸಜ್ಜಾಗುತ್ತಿದೆ.. ಇನ್ನು ದರ್ಶನ್ ಅವರ ಮುಂದಿನ ಸಿನಿಮಾ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಐತಿಹಾಸಿಕ ಸಿನಿಮಾ ರಾಜಾ ವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಇದೇ ಫೆಬ್ರವರಿ 10 ರಿಂದ ಪ್ರಾರಂಭವಾಗಲಿದ್ದು ಸದ್ಯ ಎರಡು ಸಿನಿಮಾಗಳ ನಡುವಿನ ಬಿಡುವಿನ ಸಮಯದಲ್ಲಿ ಪತ್ನಿ ಜೊತೆ ದೇವಸ್ಥಾನಗಳಿಗೆ ಭೇಟಿ‌ ನೀಡಿದ್ದಾರೆ..

ಹೌದು ದರ್ಶನ್ ಅವರು ಪತ್ನಿ ಹಾಗೂ ಕುಟುಂಬದ ಕೆಲ ಸದಸ್ಯರು ಮತ್ತು ಸ್ನೇಹಿತರೊಂದಿಗೆ ತಮಿಳುನಾಡಿನ ತಿರುನಲ್ಲೂರ್ ನ ಪ್ರಸಿದ್ಧ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ..

ದರ್ಶನ್ ಅವರು ಪ್ರತೀ ವರ್ಷವೂ ಕೂಡ ತಿರುನಲ್ಲೂರ್ ಗೆ ಭೇಟಿ ನೀಡುತ್ತಿದ್ದು ಶನೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.. ಕಳೆದ ವರ್ಷ ಶನೇಶ್ವರ ದೇವರಿಗೆ ಹೊತ್ತ ಹರಕೆಯಂತೆ ತುಲಾಭಾರ ಮಾಡಿಸಿಕೊಂಡಿದ್ದರು.. ಈ ವರ್ಷ ಪತ್ನಿಯ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ..

ದೇವಸ್ಥಾನದ ಭೇಟಿಯ ವೇಳೆ ದರ್ಶನ್ ಅವರು ಪತ್ನಿಯ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಸದಾ ಕಾಲ ಈ ಜೋಡಿ ಹೀಗೆ ಸಂತೋಷವಾಗಿರಲಿ ಎಂದು ಹಾರೈಸಿದ್ದಾರೆ..


All Rights Reserved News Jagath.